alex Certify Anna Bhagya Scheme : ‘BPL’ ಕಾರ್ಡ್ ದಾರರಿಗೆ ಮುಖ್ಯ ಮಾಹಿತಿ : ಬೇಗ ಬ್ಯಾಂಕ್ ಖಾತೆ ಮಾಡಿಸಿಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Anna Bhagya Scheme : ‘BPL’ ಕಾರ್ಡ್ ದಾರರಿಗೆ ಮುಖ್ಯ ಮಾಹಿತಿ : ಬೇಗ ಬ್ಯಾಂಕ್ ಖಾತೆ ಮಾಡಿಸಿಕೊಳ್ಳಿ

ಬೆಂಗಳೂರು : ಅನ್ನಭಾಗ್ಯ ಯೋಜನೆ ( Anna Bhagya Scheme )  ನಾಳೆಯಿಂದ ಜಾರಿಯಾಗಲಿದ್ದು, ಬ್ಯಾಂಕ್ ಖಾತೆ ಹೊಂದಿಲ್ಲದವರು ಬೇಗ ಖಾತೆ ಮಾಡಿಸಿಕೊಳ್ಳಿ ಎಂದು ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ಹೇಳಿದ್ದಾರೆ.

ನಾಳೆಯಿಂದ ಜನರಿಗೆ 5 ಕೆಜಿ ಅಕ್ಕಿ ನೀಡಲಾಗುತ್ತದೆ, ಉಳಿದ 5 ಕೆಜಿ ಅಕ್ಕಿ ಬದಲಿಗೆ ಜನರ ಬ್ಯಾಂಕ್ ಖಾತೆಗೆ ಹಾಕಲು ಹಣ ಕೂಡ ರೆಡಿ ಇದೆ ಎಂದು ಹೇಳಿದರು. ಅಕ್ಕಿ ಕೊಡುವವರೆಗೆ ಹಣ ನೀಡುವ ವ್ಯವಸ್ಥೆ ಮಾಡಿದ್ದೇವೆ. ರೇಷನ್ ಕಾರ್ಡ್ ಪ್ರಕಾರ ಯಾರು ಮನೆ ಯಜಮಾನರೋ ಅವರ ಅಕೌಂಟ್ಗೆ ಹಣ ಹಾಕುತ್ತೇವೆ. ಬಹುತೇಕ ಮಂದಿ ಬ್ಯಾಂಕ್ ಖಾತೆ ಹೊಂದಿದ್ದಾರೆ. ಇಲ್ಲದವರು ತಕ್ಷಣ ಬ್ಯಾಂಕ್ ಖಾತೆ ಮಾಡಿಸಿಕೊಂಡರೆ ಹಣ ಹಾಕುತ್ತೇವೆ ಎಂದು ಆಹಾರ ಸಚಿವ ಕೆ ಹೆಚ್ ಮುನಿಯಪ್ಪ ಹೇಳಿದ್ದಾರೆ.

5 ಕೆಜಿ ಅಕ್ಕಿ ಬದಲು ಹಣ ನೀಡಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದ್ದು, ಅಕ್ಕಿ ಕೊರತೆ ಹಿನ್ನೆಲೆ ಬಿಪಿಎಲ್ ಕಾರ್ಡ್ ದಾರರಿಗೆ ಅಕ್ಕಿ ಬದಲು ಹಣ ನೀಡಲು ನಿರ್ಧರಿಸಲಾಗಿದೆ. 1ಕೆಜಿ ಅಕ್ಕಿಗೆ 34 ರೂ ನೀಡಲು ನಿರ್ಧಾರ ಮಾಡಲಾಗಿದೆ. ಜುಲೈ 1 ರಿಂದಲೇ ಬಿಪಿಎಲ್ ಕಾರ್ಡ್ ದಾರರಿಗೆ ಹಣ ಜಮಾ ಮಾಡಲಾಗುತ್ತದೆ. ಬಿಪಿಎಲ್ ಕಾರ್ಡ್ ದಾರರಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಕೆಜಿಗೆ 34 ರೂಪಾಯಿಯಂತೆ ತಲಾ 170 ಹಣ ಪಾವತಿಸಬೇಕಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...