HomeKarnatakaBIG NEWS: ಒಂದೇ ಹುದ್ದೆಗೆ ನಾಲ್ವರು ಅಧಿಕಾರಿಗಳ ಹೆಸರು ಶಿಫಾರಸು; ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದೇನು...

BIG NEWS: ಒಂದೇ ಹುದ್ದೆಗೆ ನಾಲ್ವರು ಅಧಿಕಾರಿಗಳ ಹೆಸರು ಶಿಫಾರಸು; ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದೇನು ?

ಬೆಂಗಳೂರು: ಒಂದೇ ಹುದ್ದೆಗೆ ನಾಲ್ವರು ಅಧಿಕಾರಿಗಳ ಹೆಸರು ಶಿಫಾರಸು ಮಾಡಿ ಸಿಎಂ ಕಚೇರಿಯಿಂದಲೇ ಆದೇಶ ಕುರಿತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಕೆಲಸದ ಒತ್ತಡದಲ್ಲಿ ಹೀಗೆ ಆಗಿರಬಹುದು ಎಂದು ಸಮಜಾಯಿಷಿ ಕೊಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಕೆಲಸದ ಒತ್ತಡದಲ್ಲಿ ಸಿಎಂ ಕಚೇರಿಯಿಂದ ಹೀಗೆ ಆದೇಶವಾಗಿರಬಹುದು. ಹಲವಾರು ಜನರು ಮನವಿ ಮಾಡುತ್ತಿರುತ್ತಾರೆ. ಮನವಿ ಮೇರೆಗೆ ಪತ್ರ ನೀಡುತ್ತಿರುತ್ತಾರೆ. ಅವು ಡಬಲ್ ಆಗಿರುವ ಸಾಧ್ಯತೆ ಇರುತ್ತದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೆಲವೊಮ್ಮೆ ನನ್ನ ಕಚೇರಿಯಲ್ಲಿಯೂ ಹೀಗೆ ಆಗಿರುತ್ತೆ. ನಾನು ಈವರೆಗೂ ಒಂದು ವರ್ಗಾವಣೆಯನ್ನೂ ಮಾಡಿಲ್ಲ, ಯಾರ್ಯಾರಿಗೆ ಪತ್ರ ಹೋಗಿದೆ ಪರಿಶೀಲನೆ ಮಾಡಲು ಸೂಚಿಸಿದ್ದೇನೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular