HomeKarnatakaBIG NEWS: ಅಲುಗಾಡಿದ ಸಿಎಂ ಚೇರ್; ಬಜೆಟ್ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ

BIG NEWS: ಅಲುಗಾಡಿದ ಸಿಎಂ ಚೇರ್; ಬಜೆಟ್ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ

 

ಬೆಂಗಳೂರು: ಜುಲೈ 7ರಂದು ಬಜೆಟ್ ಮಂಡನೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಹಣಕಾಸು ಸಚಿವಾಲಯದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಈ ವೇಳೆ ಸಿಎಂ ಕುಳಿತಿದ್ದ ಕುರ್ಚಿ ಸರಿಯಿಲ್ಲದೇ ಅಲುಗಾಡಿದ್ದು, ಇದರಿಂದ ಕೋಪಗೊಂಡ ಸಿಎಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರಿನ ವಸಂತನಗರದ ಕೆ ಎಸ್ ಎಫ್ ಸಿ ಕಚೇರಿಯಲ್ಲಿ ಬಜೆಟ್ ಪೂರ್ವಬಾವಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಮುಖ್ಯಮಂತ್ರಿಗಳು ಕೂರಲು ಕುರ್ಚಿ ಸರಿಯಿರಲಿಲ್ಲ. ಸಿಎಂ ಸಿದ್ದರಾಮಯ್ಯ ಕುಳಿತಿದ್ದ ಕುರ್ಚಿ ಪದೇ ಪದೇ ಅಲುಗಾಡುತ್ತಿತ್ತು.

ಇದರಿಂದ ಗರಂ ಆದ ಸಿಎಂ ಸಿದ್ದರಾಮಯ್ಯ ಬಜೆಟ್ ಸಭೆ ನಡೆಸಲು ಕುಳಿತುಕೊಳ್ಳಲು ಕುರ್ಚಿಯೂ ಸರಿಯಿಲ್ಲ ಎಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ತಕ್ಷಣ ಅಧಿಕಾರಿಗಳು ಎದ್ದುಬಿದ್ದು ಮುಖ್ಯಮಂತ್ರಿಗಳಿಗೆ ಹೊಸ ಕುರ್ಚಿಯನ್ನು ತರಿಸಿ ಹಾಕಿದ ಘಟನೆ ನಡೆದಿದೆ

For Latest News Updates, Join Our Whatsapp Community🚩
RELATED ARTICLES

Most Popular