ಈವರೆಗೆ ಚಲನಚಿತ್ರಗಳಲ್ಲಿ ಮಾತ್ರ ನೋಡಿದ್ದ ಹಾರುವ ಕಾರಿನ ಕನಸು ಶೀಘ್ರದಲ್ಲೇ ನನಸಾಗಲಿದೆ. ಅಮೆರಿಕಾ ಸರ್ಕಾರ ಈ ವಾಹನಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಇದಕ್ಕೆ ಅನುಮತಿ ನೀಡಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಹಾರುವ ಕಾರಿನ ತಯಾರಿಕಾ ಕಂಪನಿ Alef aeronautics ಗೆ ಈಗ ಅಮೆರಿಕಾದ ವಾಯುಯಾನ (federal aviation administration) ಸಂಸ್ಥೆಯಿಂದ ಅನುಮತಿ ಪತ್ರ ಸಿಕ್ಕಿದ್ದು, ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಲು ಮತ್ತಷ್ಟು ಉತ್ತೇಜನ ಸಿಕ್ಕಿದಂತಾಗಿದೆ.
ಅಮೆರಿಕ ಮೂಲದ Alef aeronautics ಸಂಸ್ಥೆ ಈಗಾಗಲೇ ಹಾರುವ ಕಾರಿನ ಪರೀಕ್ಷಾರ್ಥ ಸಂಚಾರ ನಡೆಸಿ ಯಶಸ್ವಿಯಾಗಿದ್ದು, ಇದರ ಮಾಡೆಲ್ ಎಂ ಕಾರಿಗೆ ಅನುಮತಿ ಪತ್ರ ಲಭಿಸಿದೆ. 200 ಕಿ.ಮೀ.ವರೆಗೆ ಈ ಕಾರು ಸಂಚರಿಸಲಿದೆ ಎಂದು ಹೇಳಲಾಗಿದೆ.
2025ರ ಕೊನೆಯ ತ್ರೈಮಾಸಿಕದಲ್ಲಿ ಮಾಡೆಲ್ ಎ ಕಾರುಗಳು ಬಿಡುಗಡೆಯಾಗಬಹುದು ಎಂಬ ನಿರೀಕ್ಷೆ ಇದ್ದು, ಇದರ ಜೊತೆಗೆ ಮುಂದಿನ ದಿನಗಳಲ್ಲಿ ಮಾಡಲ್ ಝೆಡ್ ಎಂಬ ಮತ್ತೊಂದು ಕಾರನ್ನು ಸಹ ಬಿಡುಗಡೆ ಮಾಡುವ ಸಾಧ್ಯತೆ ಇದೆ. 2035ರ ವೇಳೆಗೆ ಇದು ಬಿಡುಗಡೆಯಾಗಲಿದೆ ಎನ್ನಲಾಗಿದ್ದು, ಇದರ ಬೆಲೆ 35,000 ಡಾಲರ್ ಆಸುಪಾಸಿನಲ್ಲಿ ಇರಲಿದೆ ಎನ್ನಲಾಗಿದೆ.