HomeKarnatakaBIG NEWS : ‘ಶಕ್ತಿ ಯೋಜನೆ’ ವಿರುದ್ಧ ಸಿಡಿದೆದ್ದ ಆಟೋ ಚಾಲಕರು : ಸರ್ಕಾರದ ವಿರುದ್ಧ...

BIG NEWS : ‘ಶಕ್ತಿ ಯೋಜನೆ’ ವಿರುದ್ಧ ಸಿಡಿದೆದ್ದ ಆಟೋ ಚಾಲಕರು : ಸರ್ಕಾರದ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆ

ಬೆಂಗಳೂರು : ಮಹಿಳೆಯರಿಗೆ ಉಚಿತ ಪ್ರಯಾಣದ ಸೇವೆ ನೀಡಿದ ‘ಶಕ್ತಿ ಯೋಜನೆ’ ವಿರುದ್ಧ ಆಟೋ ಚಾಲಕರು ಸಿಡಿದೆದ್ದಿದ್ದಾರೆ.

ಉಚಿತ ಪ್ರಯಾಣ ಯೋಜನೆಯಿಂದ ನಮಗೆ ಬಹಳ ತೊಂದರೆಯಾಗಿದೆ. ಮೊದಲು ನಮಗೆ ಮಹಿಳಾ ಪ್ರಯಾಣಿಕರು ಹೆಚ್ಚಿರುತ್ತಿದ್ದರು. ಆದರೆ ಸರ್ಕಾರ ಉಚಿತ ಬಸ್ ಸೇವೆ ಕೊಟ್ಟ ಮೇಲೆ ಯಾರೂ ಆಟೋ ಹತ್ತುತ್ತಿಲ್ಲ. ಸರ್ಕಾರಿ ಬಸ್ ಗಳು ರಶ್ ಆಗಿ ಓಡಾಡುತ್ತಿದೆ, ಆದರೆ ಆಟೋ ಖಾಲಿಯಾಗಿ ಓಡಾಡುತ್ತಿದೆ. ದಿನಕ್ಕೆ 100 ರೂಪಾಯಿ ಬಾಡಿಗೆ ಮಾಡುವುದು ಕೂಡ ಕಷ್ಟವಾಗಿದೆ. ಸರ್ಕಾರ ಉಚಿತ ಪ್ರಯಾಣದ ಯೋಜನೆ ಜಾರಿಗೆ ತಂದು ಆಟೋ ಚಾಲಕರ ಹೊಟ್ಟೆಗೆ ಹೊಡೆದಿದೆ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಚಾಲಕರು ಈ ಬಗ್ಗೆ ಗಮನ ಹರಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.

ಆಟೋ ಚಾಲಕರ ಸಮಸ್ಯೆ ಬಗೆಹರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಶಕ್ತಿ ಯೋಜನೆ ಜಾರಿಯಿಂದ ಆಟೋ ಚಾಲಕರ ಮೇಲೆ ನೇರ ಪರಿಣಾಮ ಬೀರಿದ್ದು, ಶಕ್ತಿ ಯೋಜನೆ ಬಾಡಿಗೆ ಇಲ್ಲದೇ ಕಂಗಾಲಾದ ಆಟೋ ಚಾಲಕರು, ಅನಿವಾರ್ಯವಾಗಿ ಆಟೋ ಮಾರಾಟಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular