HomeCrimeBIG NEWS: ಪತ್ನಿ, ಮಗನನ್ನು ನದಿಗೆ ತಳ್ಳಿ ತಾನೂ ಆತ್ಮಹತ್ಯೆಗೆ ಶರಣಾದ ಪತಿ

BIG NEWS: ಪತ್ನಿ, ಮಗನನ್ನು ನದಿಗೆ ತಳ್ಳಿ ತಾನೂ ಆತ್ಮಹತ್ಯೆಗೆ ಶರಣಾದ ಪತಿ

ಕಾರವಾರ: ಪತ್ನಿ ಹಾಗೂ ಮಗನನ್ನು ನದಿಗೆ ತಳ್ಳಿ ಉದ್ಯಮಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಚಿತ್ತಾಕುಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕಾರವಾರದ ಗೋಪಶಿಟ್ಟಾ ಮೂಲದ ಶ್ಯಾಮ್ ಪಾಟೀಲ್ (40), ಜ್ಯೋತಿ ಪಾಟೀಲ್ (35) ಹಾಗೂ ಮಗ ದಕ್ಷ (12) ಮೃತರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗೋವಾದ ಕುಕ್ಕಳ್ಳಿಯಲ್ಲಿ ವಾಸವಾಗಿದ್ದ ಕುಟುಂಬ ಸಾಲ ಬಾಧೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕಾರವಾರದ ಕಾಳಿ ನದಿ ಬ್ರಿಡ್ಜ್ ನಿಂದ ಪತ್ನಿ ಹಾಗೂ ಮಗನನ್ನು ನದಿಗೆ ತಳ್ಳಿ ಶ್ಯಾಮ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ದೇವಭಾಗ ಕಡಲತೀರದಲ್ಲಿ ಜ್ಯೋತಿ ಹಾಗೂ ಮಗ ದಕ್ಷನ ಶವ ಪತ್ತೆಯಾಗಿದೆ. ಶ್ಯಾಮ್ ಪಾಟೀಲ್ ಮೃತದೇಹ ಕುಕ್ಕಳ್ಳಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular