HomeKarnatakaBIG NEWS: ಆ ಹೊಸಬರು ಬಂದಿದ್ದಕ್ಕೆ ನಮ್ಮ ಸರ್ಕಾರ ಬಂದಿದ್ದು, ಈಶ್ವರಪ್ಪ ಮಂತ್ರಿ ಆಗಿದ್ದು; ಟಾಂಗ್...

BIG NEWS: ಆ ಹೊಸಬರು ಬಂದಿದ್ದಕ್ಕೆ ನಮ್ಮ ಸರ್ಕಾರ ಬಂದಿದ್ದು, ಈಶ್ವರಪ್ಪ ಮಂತ್ರಿ ಆಗಿದ್ದು; ಟಾಂಗ್ ನೀಡಿದ ಸಿ.ಸಿ. ಪಾಟೀಲ್

ಬೆಂಗಳೂರು: ಆಪರೇಷನ್ ಕಮಲವೇ ಬಿಜೆಪಿ ಸೋಲಿಗೆ ಕಾರಣ. ನಾವೇ ಕರ್ಕೊಂಡು ಬಂದು ಅನುಭವಿಸ್ತಿದೀವಿ ಎಂದು ವಲಸಿಗ ಬಿಜೆಪಿ ನಾಯಕರ ವಿರುದ್ಧ ಕಿಡಿ ಕಾರಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಸಿ.ಸಿ.ಪಾಟೀಲ್, ಈಶ್ವರಪ್ಪ ಹೇಳಿಕೆಯನ್ನು ನಾನು ಒಪ್ಪಲ್ಲ ಎಂದಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಸಿ. ಪಾಟೀಲ್, ಆ ಹೊಸಬರು ಬಂದಿದ್ದಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಈಶ್ವರಪ್ಪನವರು ಮಂತ್ರಿಯಾಗಿದ್ದು ಎಂದು ತಿರುಗೇಟು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಲ್ಲವನ್ನೂ ಬೇರೆ ಪಕ್ಷದಿಂದ ಬಂದವರ ಮೇಲೆ ಹಾಕುವುದು ಸರಿಯಲ್ಲ, ಅವರು ಬಂದಿದ್ದಕ್ಕೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಇಲ್ಲವಾದರೇ ವಿಪಕ್ಷದಲ್ಲಿಯೇ ಇರಬೇಕಿತ್ತು. ನಮ್ಮ ಸರ್ಕಾರ ಎಲ್ಲಿ ರಚನೆಯಾಗುತ್ತಿತ್ತು? ಎಂದು ಪ್ರಶ್ನಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular