ಸಿನೆಮಾರಂಗಕ್ಕೆ ಎಂಟ್ರಿ ಕೊಟ್ಟು 31 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿರುವ ಬಾಲಿವುಡ್ ನಟ ಶಾರುಖ್ ಖಾನ್ ಸದಾ ತಮ್ಮ ಮೊನಚು ಮಾತುಗಾರಿಕೆಯಿಂದ ಅಭಿಮಾನಿಗಳಲ್ಲಿ ಸಂಚಲನ ಸೃಷ್ಟಿಸುತ್ತಾರೆ.
ಈ ಬಾರಿ ಸಂಚಾರೀ ನಿಯಮ ಪಾಲನೆ ವಿಚಾರವಾಗಿ ಜಾಗೃತಿ ಮೂಡಿಸಲು ಮಾಡಿರುವ ಟ್ವೀಟ್ ಒಂದರ ಮೂಲಕ ಶಾರುಖ್ ತಮ್ಮ ಅಭಿಮಾನಿಗಳಲ್ಲಿ ಹೆಲ್ಮೆಟ್ ಧಾರಣೆಯ ಕುರಿತು ಜಾಗೃತಿ ಮೂಡಿಸಿದ್ದಾರೆ.
31 ವರ್ಷಗಳ ಹಿಂದೆ ತೆರೆ ಕಂಡ ತಮ್ಮದೇ ಅಭಿನಯದ ’ದೀವಾನಾ’ ಚಿತ್ರದಲ್ಲಿ ಬೈಕ್ ರೈಡ್ ಮಾಡುತ್ತಾ ಹಾಡೊಂದರಲ್ಲಿ ನಟಿಸುವ ವಿಡಿಯೋ ತುಣುಕೊಂದನ್ನು ಶೇರ್ ಮಾಡಿದ ಶಾರುಖ್, “ನಾನು ಹೆಲ್ಮೆಟ್ ಧರಿಸಬೇಕಿತ್ತು,” ಎಂದಿದ್ದಾರೆ. ಚಿತ್ರದಲ್ಲಿ ತಮ್ಮ ಎಂಟ್ರಿಯ ದೃಶ್ಯವನ್ನು ಶೇರ್ ಮಾಡಿಕೊಂಡ ಅಭಿಮಾನಿಯೊಬ್ಬರ ಟ್ವೀಟ್‌ಗೆ ಶಾರುಖ್ ಪ್ರತಿಕ್ರಿಯೆ ನೀಡುತ್ತಾ ಹೀಗೆ ಹೇಳಿದ್ದಾರೆ.
ಈ ಟ್ಛೀಟ್ ಅನ್ನು ಸಮಯಕ್ಕೆ ಸರಿಯಾಗಿ ಬಳಸಿಕೊಂಡಿರುವ ಮುಂಬೈ ಸಂಚಾರಿ ಪೊಲೀಸ್, ಬಾಲಿವುಡ್ ಬಾದ್‌ಶಾ ಅಭಿನಯದ ’ಸ್ವದೇಸ್’, ’ಮೈ ಹೂನ್ ನಾ’ ಹಾಗೂ ’ಬಾದ್‌ಶಾ’ ಚಿತ್ರಗಳ ಹೆಸರನ್ನು ಬಳಸಿ, “ಸ್ವದೇಶವಿರಲಿ ಅಥವಾ ಪರದೇಶವೇ ಇರಲಿ, ಸುರಕ್ಷತೆಯ ಬಾದ್‌ಶಾ ಹೆಲ್ಮೆಟ್ ಇದೆಯಲ್ಲ?” ಎಂದು ಟ್ವೀಟ್ ಮಾಡಿತ್ತು.
Wow just realised it’s 31 yrs to the day when Deewana hit the screens. It’s been quite a ride mostly a good one. Thanks all and we can do 31minutes of #AskSRK ??
— Shah Rukh Khan (@iamsrk) June 25, 2023
Should have worn a helmet!!! https://t.co/pFr5hbNdXg
— Shah Rukh Khan (@iamsrk) June 25, 2023
Aapki baat sunn kar meri halaat hai – main rou ya hasoon karoon main kya karoon wali 😭😂 Aap Helmet ki baat kar rahe… mere Superhero kabhi toh kisi vehicle mein theek se normally baith gaye yahin kitna hai mere liye 😅 Woh toh bas shuruat tha, train ke upar dance samne hai 😜 pic.twitter.com/iJ94B8ZLT4
— ❥ Sнαн ᏦᎥ Ᏸ𝐢ω𝐢 𓀠 (@JacyKhan) June 25, 2023