HomeKarnatakaBIG NEWS: ಬಿ ಎಸ್ ವೈ, ಬೊಮ್ಮಾಯಿ ಮನೆಗೆ ಡಿಸಿಎಂ ಡಿ.ಕೆ.ಶಿ ಭೇಟಿ ವಿಚಾರ; ಸೌಜನ್ಯಕ್ಕಾಗಿ...

BIG NEWS: ಬಿ ಎಸ್ ವೈ, ಬೊಮ್ಮಾಯಿ ಮನೆಗೆ ಡಿಸಿಎಂ ಡಿ.ಕೆ.ಶಿ ಭೇಟಿ ವಿಚಾರ; ಸೌಜನ್ಯಕ್ಕಾಗಿ ಅಲ್ಲ ಎಂದು ಟಾಂಗ್ ನೀಡಿದ ಶಾಸಕ ಯತ್ನಾಳ್

ಬೆಳಗಾವಿ: ಕಾಂಗ್ರೆಸ್ ಸರ್ಕಾರ ಹೆಚ್ಚು ದಿನ ನಡೆಯಲ್ಲ, ಶೀಘ್ರದಲ್ಲಿಯೇ ಆಕ್ಸಿಡೆಂಟ್ ಆಗುವುದು ಖಚಿತ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಯತ್ನಾಳ್, ಬಿಜೆಪಿ ನಾಯಕರ ಹೊಂದಾಣಿಕೆ ರಾಜಕಾರಣದ ಬಗ್ಗೆಯೂ ಪರೋಕ್ಷವಾಗಿ ಟಾಂಗ್ ನೀಡಿದ್ದು, ನಾವ್ಯಾಕೆ ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಮಾಡಲು ಓಡಾಡಬೇಕು ಎಂದು ಪ್ರಶ್ನಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡಿ.ಕೆ.ಶಿವಕುಮಾರ್ ಅವರು ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಮನೆಗೆ ಬೇಟಿ ನೀಡಿದ್ದಾರೆ. ಏನ್ ಸೌಜನ್ಯಕ್ಕೆ ಇಬ್ಬರ ಮನೆಗೆ ಭೇಟಿ ನೀಡ್ತಿಲ್ಲ. ಸೋನಿಯಾ ಗಾಂಧಿಯವರಿಗೆ ಗೊತ್ತಾಗಲಿ ಎಂದು ಭೇಟಿ ಕೊಡುತ್ತಿದ್ದಾರೆ. ನಾವ್ಯಾಕೆ ಡಿಕೆಶಿ ಸಿಎಂ ಮಾಡಲು ಓಡಾಡಬೇಕು? ಮೊನ್ನೆ ಸಿಎಂ ಸಿದ್ದರಾಮಯ್ಯ ಏನಂದ್ರು? ಅಧಿಕಾರದಲ್ಲಿದ್ದಾಗ ನಾನು ವಿಪಕ್ಷದವರ ಮನೆಗೆ ಭೇಟಿ ಕೊಡಲ್ಲ ಅಂದ್ರು. ನಾವು ಹಾಗೆ ಹೇಳಬೇಕು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮೂತಿನೂ ನೋಡಲ್ಲ, ಮನೆಗೂ ಭೇಟಿ ಕೊಡಲ್ಲ ಎಂದು. ಅಂದಾಗ ಮಾತ್ರ ನಮ್ಮ ಪಾರ್ಟಿ ಉಳಿಯಲು ಸಾಧ್ಯ ಎಂದು ಹೇಳಿದರು.

 

 

For Latest News Updates, Join Our Whatsapp Community🚩
RELATED ARTICLES

Most Popular