HomeKarnatakaBIG NEWS: ಕಾಂಗ್ರೆಸ್ ನಾಯಕರ ತಲೆಯಲ್ಲಿ ಗೆಲ್ಲುವ ನಂಬಿಕೆ ಇರಲಿಲ್ಲ, ಇದ್ದಿದ್ರೆ ʼಗ್ಯಾರಂಟಿʼ ಘೋಷಿಸುತ್ತಿರಲಿಲ್ಲ; ಮಾಜಿ...

BIG NEWS: ಕಾಂಗ್ರೆಸ್ ನಾಯಕರ ತಲೆಯಲ್ಲಿ ಗೆಲ್ಲುವ ನಂಬಿಕೆ ಇರಲಿಲ್ಲ, ಇದ್ದಿದ್ರೆ ʼಗ್ಯಾರಂಟಿʼ ಘೋಷಿಸುತ್ತಿರಲಿಲ್ಲ; ಮಾಜಿ ಸಚಿವ ಆರ್. ಅಶೋಕ್ ಟಾಂಗ್

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಸರ್ಕಾರ ಬರುತ್ತಿದ್ದಂತೆ ಮಳೆಯೂ ಹಿಂದೆ ಹೋಯ್ತು. ದರಿದ್ರ ಸರ್ಕಾರ ಬಂದ ಮೇಲೆ ಮಳೆಯೂ ಇಲ್ಲ. ಕೆ.ಆರ್.ಎಸ್. ಖಾಲಿಯಾಗಿ ಕುಡಿಯುವ ನೀರಿಗೂ ಸಮಸ್ಯೆಯಾಗುತ್ತಿದೆ ಎಂದು ಮಾಜಿ ಸಚಿವ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ಮಾತನಾಡಿದ ಆರ್. ಅಶೋಕ್, ಕಾಂಗ್ರೆಸ್ ನಾಯಕರ ತಲೆಯಲ್ಲಿ ಈ ಬಾರಿ ಗೆಲ್ಲುವ ನಂಬಿಕೆ ಇರಲಿಲ್ಲ. ಗೆಲ್ಲುತ್ತೇವೆ ಅಂತಾ ಗೊತ್ತಿದ್ದಿದ್ರೆ ಗ್ಯಾರಂಟಿ ಘೋಷಣೆಯನ್ನೇ ಮಾಡುತ್ತಿರಲಿಲ್ಲ. ಅತಂತ್ರ ಬಂದ್ರೆ ಜೆಡಿಎಸ್ ಜೊತೆ ಸರ್ಕಾರ ಮಾಡೋಣ ಅಂದುಕೊಂಡಿದ್ದರು. ಆದರೆ ಜೆಡಿಎಸ್ ಗೆ ಬರುವ ಮತ ಕಾಂಗ್ರೆಸ್ ಗೆ ಶಿಫ್ಟ್ ಆಗಿದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾಂಗ್ರೆಸ್ ನಾಯಕರು ನಾವೇನು ಪುಕ್ಸಟ್ಟೆ ಅಕ್ಕಿ ಕೇಳಿಲ್ಲ, ದುಡ್ಡು ಕೊಡ್ತೀವಿ ಅಂತಾರಲ್ಲ. ಹಾಗಾದ್ರೆ ಖರೀದಿ ಮಾಡಿ ಅಕ್ಕಿ ಕೊಡಿ. ಅಕ್ಕಿ ಕೊಡಲು ಆಗಲ್ಲ ಅಂದ್ರೆ ಆ ದುಡ್ಡನ್ನು ಜನರಿಗೆ ಕೊಡಿ ಎಂದು ಟಾಂಗ್ ನೀಡಿದರು.

For Latest News Updates, Join Our Whatsapp Community🚩
RELATED ARTICLES

Most Popular