ಪಾಕಿಸ್ತಾನದ ಉನ್ನತ ಶಿಕ್ಷಣ ಆಯೋಗ (HEC) ವಿಶ್ವವಿದ್ಯಾನಿಲಯಗಳಲ್ಲಿ ಹೋಳಿ ಆಚರಣೆಯನ್ನು ನಿಷೇಧಿಸಿದೆ. ಕ್ವೈಡ್-ಐ-ಅಜಮ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಜೂನ್ 12 ರಂದು ಕ್ಯಾಂಪಸ್‌ನಲ್ಲಿ ಹೋಳಿ ಆಚರಿಸಿದ ವಿಡಿಯೋಗಳು ವೈರಲ್ ಆದ ಕೆಲವು ದಿನಗಳ ನಂತರ HEC ಈ ಆದೇಶ ಹೊರಡಿಸಿದೆ.
“ಸಾಮಾಜಿಕ ಸಾಂಸ್ಕೃತಿಕ ಮೌಲ್ಯಗಳನ್ನು” ಅನುಸರಿಸಲು ವಿದ್ಯಾರ್ಥಿಗಳು ಹೋಳಿ ಉತ್ಸವ ಆಚರಿಸುವುದನ್ನು ನಿಷೇಧಿಸಲಾಗಿದೆ ಎಂದು ಆಯೋಗವು ನೋಟಿಸ್‌ನಲ್ಲಿ ತಿಳಿಸಿದೆ.
ಇಂತಹ ಚಟುವಟಿಕೆಗಳಿಂದ ದೇಶದ ಸಾಮಾಜಿಕ-ಸಾಂಸ್ಕೃತಿಕ ಮೌಲ್ಯಗಳು ಹಾಳಾಗುತ್ತವೆ ಮತ್ತು ದೇಶದ ಇಸ್ಲಾಮಿಕ್ ಗುರುತಿನ ಅವನತಿಯಾಗುತ್ತದೆ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.
ಸಾಂಸ್ಕೃತಿಕ, ಜನಾಂಗೀಯ ಮತ್ತು ಧಾರ್ಮಿಕ ವೈವಿಧ್ಯತೆಯು ಎಲ್ಲಾ ನಂಬಿಕೆಗಳು ಮತ್ತು ಪಂಥಗಳನ್ನು ಆಳವಾಗಿ ಗೌರವಿಸುವ ಅಂತರ್ಗತ ಮತ್ತು ಸಹಿಷ್ಣು ಸಮಾಜಕ್ಕೆ ಕಾರಣವಾಗುತ್ತದೆ ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ. ಆದರೂ ಮಿತಿಮೀರಿ ಹೋಗದೆ ಅಳತೆಯ ಮಿತಿಯಲ್ಲೇ ಮಾಡಬೇಕಾಗಿದೆ. ಪರ ಹಿತಚಿಂತನೆಯ ವಿಮರ್ಶಾತ್ಮಕ ಚಿಂತನೆಯ ಮಾದರಿಯಿಂದ ದೂರವಿರುವ ಸ್ವ-ಸೇವೆಯ ಪಟ್ಟಭದ್ರ ಹಿತಾಸಕ್ತಿಗಳನ್ನು ತಮ್ಮ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಬೇಕು ಎಂದು ನೋಟಿಸ್ ನಲ್ಲಿ ಹೇಳಲಾಗಿದೆ.
ವಿಶ್ವವಿದ್ಯಾನಿಲಯದಲ್ಲಿ ನಡೆದ ಹೋಳಿ ಆಚರಣೆ ಘಟನೆಯು ಕಳವಳವನ್ನು ಉಂಟುಮಾಡಿದೆ ಮತ್ತು ದೇಶದ ಪ್ರತಿಷ್ಠೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಇಂತಹ ಕಾರ್ಯಕ್ರಮಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳು ದೂರವಿರಬೇಕೆಂದು ಸಲಹೆ ನೀಡಲಾಗಿದೆ.
ಈ ತಿಂಗಳ ಆರಂಭದಲ್ಲಿ, ಇಸ್ಲಾಮಾಬಾದ್‌ನ ಕ್ವೈಡ್-ಐ-ಅಜಮ್ ವಿಶ್ವವಿದ್ಯಾಲಯದಲ್ಲಿ ಹೋಳಿ ಆಚರಣೆಯ ವೀಡಿಯೊಗಳು ವೈರಲ್ ಆಗಿದ್ದವು. ವೀಡಿಯೋಗಳಲ್ಲಿ ವಿದ್ಯಾರ್ಥಿಗಳು ಬಣ್ಣಗಳಿಂದ ಹೋಳಿ ಆಡುವುದನ್ನು ಮತ್ತು ಕಾಲೇಜು ಆವರಣದಲ್ಲಿ ಸಂಭ್ರಮಾಚರಣೆಯನ್ನು ಆನಂದಿಸುತ್ತಿರುವುದನ್ನು ಕಾಣಬಹುದು.
ವಿಶ್ವವಿದ್ಯಾನಿಲಯದ ರಾಜಕೀಯೇತರ ಸಾಂಸ್ಕೃತಿಕ ಸಂಘಟನೆಯಾದ ಮೆಹ್ರಾನ್ ವಿದ್ಯಾರ್ಥಿಗಳ ಮಂಡಳಿಯು ಈ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ವರದಿಗಳು ತಿಳಿಸಿವೆ.