HomeKarnataka'ಅಕ್ಕಿ ವಿಚಾರದಲ್ಲೂ ಬಿಜೆಪಿಯವರು ರಾಜಕೀಯ ಮಾಡುವುದು ಸರಿಯಲ್ಲ : ಸಚಿವ M.B ಪಾಟೀಲ್

‘ಅಕ್ಕಿ ವಿಚಾರದಲ್ಲೂ ಬಿಜೆಪಿಯವರು ರಾಜಕೀಯ ಮಾಡುವುದು ಸರಿಯಲ್ಲ : ಸಚಿವ M.B ಪಾಟೀಲ್

ಬೆಂಗಳೂರು : ಅಕ್ಕಿ ವಿಚಾರದಲ್ಲೂ ಬಿಜೆಪಿಯವರು (BJP) ರಾಜಕೀಯ ಮಾಡುವುದು ಸರಿಯಲ್ಲ, ಕೇಂದ್ರದ ಬಳಿ ಮಾತನಾಡಿ ಅಕ್ಕಿ ಕೊಡಿಸಿದ್ದರೆ ರಾಜ್ಯ ಬಿಜೆಪಿಗೆ ಒಳ್ಳೆಯ ಹೆಸರು ಬರುತ್ತಿತ್ತು ಎಂದು ಸಚಿವ ಎಂ.ಬಿ ಪಾಟೀಲ್ (Minister M B Patil) ಹೇಳಿದರು.

ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬಿಜೆಪಿವರು ರಾಜಕೀಯ ಮಾಡುವುದು ಬಿಟ್ಟು ರಾಜ್ಯಕ್ಕೆ ಅಕ್ಕಿ ಕೊಡಿಸುವ ಕೆಲಸ ಮಾಡಬೇಕು. ಬಿಜೆಪಿಯ ಅನಂತ್ ಕುಮಾರ್ ಅವರು ಯಾವಾಗಲೂ ರಾಜ್ಯದ ಪರ ನಿಲ್ಲುತ್ತಿದ್ದರು. ಆ ಕೆಲಸವನ್ನು ಈಗಿನ ಬಿಜೆಪಿಯವರು ಯಾಕೆ ಮಾಡುತ್ತಿಲ್ಲ.ಅದು ಬಿಟ್ಟು ಸುಮ್ಮನೆ ರಾಜಕೀಯ ಮಾಡುತ್ತಿದ್ದಾರೆ. ನಾವೇನು ಕೇಂದ್ರ ಸರ್ಕಾರದ ಬಳಿ ಪುಕ್ಕಟೆಯಾಗಿ ಅಕ್ಕಿ ಕೇಳುತ್ತಿಲ್ಲ. ಬಿಜೆಪಿಯವರೇ ಅಕ್ಕಿ ಕೊಡಿಸಿದರೆ ಅವರಿಗೆ ಒಳ್ಳೆಯ ಹೆಸರು ಬರುತ್ತಿತ್ತು.

ನಾನು ಯಾವತ್ತೂ ಜಾತಿ ರಾಜಕಾರಣ ಮಾಡಿದವನಲ್ಲ. ನಾನು ಅನುಭವ ಮಂಟಪದಿಂದ ಬಂದವನು. ನನ್ನನ್ನು ಯಾರೂ ಟಾರ್ಗೆಟ್ ಮಾಡಲು ಸಾಧ್ಯವಿಲ್ಲ. ನನಗೆ ಯಾರಾದ್ರೂ ಬೈದರೆ ಲಿಂಗಾಯತರಿಗೆ ಬೈದಂತಾಗುತ್ತಾ? ಕೆಲವರು ಇದನ್ನೇ ರಾಜಕೀಯ ಮಾಡುತ್ತಾರೆ ಎಂದು ಹೇಳಿದ್ರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular