HomeInternationalಮನೆ ಬಾಡಿಗೆಗಿಂತ ವಿಮಾನ ಪ್ರಯಾಣವೇ ಲೇಸೆಂದ ಮಹಿಳೆ.....!

ಮನೆ ಬಾಡಿಗೆಗಿಂತ ವಿಮಾನ ಪ್ರಯಾಣವೇ ಲೇಸೆಂದ ಮಹಿಳೆ…..!

ಸೋಫಿಯಾ ಸೆಲೆಂಟಾನೊ ಎಂಬ ಮಹಿಳೆ ನ್ಯೂಜೆರ್ಸಿಯಿಂದ ತನ್ನ ಕಚೇರಿಗೆ ವಾರಕ್ಕೊಮ್ಮೆ ವಿಮಾನದ ಮೂಲಕ ಪ್ರಯಾಣಿಸುತ್ತಾಳೆ. ಸೆಲೆಂಟಾನೊ ತನ್ನ ಟಿಕ್‌ಟಾಕ್ ಖಾತೆಯಲ್ಲಿ ಇದನ್ನು ಬಹಿರಂಗಪಡಿಸಿದ್ದಾಳೆ. ಇದಕ್ಕೆ ಕಾರಣ, ಮನೆ ಬಾಡಿಗೆಯನ್ನು ತಪ್ಪಿಸುವುದಕ್ಕಾಗಿ !

ಹೌದು. ನೀವು ಕೇಳುತ್ತಿರುವುದು ನಿಜ. ಸೋಫಿಯಾ ನ್ಯೂಜೆರ್ಸಿಯಲ್ಲಿ ಕೆಲಸ ಮಾಡುತ್ತಿದ್ದು, ಈಕೆಯ ಮನೆಯಿಂದ ಕಚೇರಿ ನೂರಾರು ಕಿ.ಮೀ. ದೂರದಲ್ಲಿದೆ. ಆದರೆ ನ್ಯೂಜೆರ್ಸಿಯಲ್ಲಿ ಮನೆಯನ್ನು ಬಾಡಿಗೆಗೆ ಪಡೆದರೆ ವಿಮಾನದಲ್ಲಿ ಹೋಗುವುದಕ್ಕಿಂತ ಹೆಚ್ಚು ಬೆಲೆ ಇದೆ ಎನ್ನುವುದು ಅವರ ಮಾತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದೇ ಕಾರಣಕ್ಕೆ ಮನೆ ಬಾಡಿಗೆ ನೀಡುವುದಕ್ಕಿಂತ ಇದು ಅಗ್ಗವಾಗಿದೆ ಎಂದು ವಿಮಾನದಲ್ಲಿ ತಿರುಗಾಡುತ್ತಾರೆ. ನ್ಯೂಯಾರ್ಕ್ ನಗರದಲ್ಲಿ ಮನೆ ಬಾಡಿಗೆ ಸಿಕ್ಕಾಪಟ್ಟೆ ದುಬಾರಿಯಾಗಿದೆ. ಈಕೆ ಇರುವ ಡೌನ್‌ಟೌನ್ ಮ್ಯಾನ್‌ಹ್ಯಾಟನ್‌ನಿಂದ ಸುಮಾರು 45 ನಿಮಿಷಗಳ ವಿಮಾನ ಪ್ರಯಾಣ ಮಾಡಿ ಕಚೇರಿ ತಲುಪಬೇಕಿದೆ.

For Latest News Updates, Join Our Whatsapp Community🚩
RELATED ARTICLES

Most Popular