HomeKarnatakaBIG NEWS: ಗ್ರ್ಯಾನೈಟ್ ಮಾಫಿಯಾಗೆ ರೈತ ಬಲಿ ಪ್ರಕರಣ; ತನಿಖೆಗೆ ಸೂಚನೆ; ತಪ್ಪಿತಸ್ಥರ ವಿರುದ್ಧ ಕಠಿಣ...

BIG NEWS: ಗ್ರ್ಯಾನೈಟ್ ಮಾಫಿಯಾಗೆ ರೈತ ಬಲಿ ಪ್ರಕರಣ; ತನಿಖೆಗೆ ಸೂಚನೆ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ

ಚಿಕ್ಕಬಳ್ಳಾಪುರ: ಗ್ರ್ಯಾನೈಟ್ ಮಾಫಿಯಾಗೆ ರೈತ ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ರವೀಂದ್ರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪ್ರಕರಣ ಸಂಬಂಧ ಈಗಾಗಲೇ ತನಿಖೆಗೆ ಸೂಚಿಸಲಾಗಿದ್ದು, ಪೊಲೀಸರಿಂದ ವರದಿ ಬಂದ ಬಳಿಕ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರದ ಗುಮ್ಮಲಾಪುರ ಗ್ರಾಮದಲ್ಲಿ ಗ್ರ್ಯಾನೈಟ್ ಮಾಫಿಯಾಗೆ ರೈತ ರಾಘವೇಂದ್ರ ಎಂಬುವವರು ಸಾವನ್ನಪ್ಪಿದ್ದಾರೆ. ಗ್ರ್ಯಾನೈಟ್ ಮಾಫಿಯಾ ತಡೆಯಲು ಮುಂದಾಗಿದ್ದಕ್ಕೆ ರೈತನ ಮೇಲೆ ಜಮೀನಿನಲ್ಲಿಯೇ ಲಾರಿ ಹರಿಸಿ ಹತ್ಯೆ ಮಾಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular