alex Certify ‘ಪಿಜಿ ನೀಟ್’ ರದ್ದು ಮಾಡಿ ಇನ್ಮುಂದೆ ‘ನೆಕ್ಸ್ಟ್’ ಪರೀಕ್ಷೆ ನಡೆಸಲು ನಿರ್ಧಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಪಿಜಿ ನೀಟ್’ ರದ್ದು ಮಾಡಿ ಇನ್ಮುಂದೆ ‘ನೆಕ್ಸ್ಟ್’ ಪರೀಕ್ಷೆ ನಡೆಸಲು ನಿರ್ಧಾರ

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗೆ ಪ್ರವೇಶ ಪಡೆಯಲು ಕೇಂದ್ರ ಸರ್ಕಾರ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ -ಪಿಜಿ ನೀಟ್ ರದ್ದುಪಡಿಸಿ ರಾಷ್ಟ್ರೀಯ ಎಕ್ಸಿಟ್ ಟೆಸ್ಟ್ –ನೆಕ್ಸ್ಟ್ ನಡೆಸಲು ನಿರ್ಧರಿಸಲಾಗಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗ ನವದೆಹಲಿಯಲ್ಲಿ ಇತ್ತೀಚಿಗೆ ವೈದ್ಯಕೀಯ ಕೋರ್ಸ್ ನಡೆಸುತ್ತಿರುವ ವಿವಿಗಳ ಕುಲಪತಿಗಳೊಂದಿಗೆ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದಲೇ ರಾಷ್ಟ್ರೀಯ ಎಕ್ಸಿಟ್ ಟೆಸ್ಟ್ ಜಾರಿಗೊಳಿಸಲು ನಿರ್ಧರಿಸಲಾಗಿದೆ.

ಪ್ರಸ್ತುತ ಎಂಬಿಬಿಎಸ್ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ನೆಕ್ಸ್ಟ್ ಪರೀಕ್ಷೆ ಬರೆಯಬಹುದಾಗಿದೆ. ಮುಂದಿನ ವಾರ ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಎಂಬಿಬಿಎಸ್ ಪೂರ್ಣಗೊಳಿಸಿದವರು ಮುಂದಿನ ಪಿಜಿ ವ್ಯಾಸಂಗಕ್ಕಾಗಿ ಮೆಡಿಕಲ್ ಕೌನ್ಸೆಲಿಂಗ್ ಕಮಿಟಿ ನಡೆಸುವ ಪರೀಕ್ಷೆ ಬರೆಯಬೇಕಿದ್ದು, ನಂತರ ಕೇಂದ್ರೀಕೃತ ಕೌನ್ಸೆಲಿಂಗ್ ಮೂಲಕ ಸೀಟು ಹಂಚಿಕೆ ನಡೆಸಲಾಗುತ್ತಿತ್ತು. ನೆಕ್ಸ್ಟ್ ಪರೀಕ್ಷೆಯನ್ನು ಎರಡು ವಿಭಾಗದಲ್ಲಿ ನಡೆಸಲಿದ್ದು, ಒಂದು ವಿಭಾಗದಲ್ಲಿ ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು. ಮತ್ತೊಂದು ವಿಭಾಗದಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿ ಇಂಟರ್ನ್ ಶಿಪ್ ಮಾಡಿದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದಾಗಿದೆ.

ಎಂಬಿಬಿಎಸ್ ಅಂತಿಮ ವರ್ಷದ ಪರೀಕ್ಷೆಯ ಭಾಗದ ರೀತಿಯಲ್ಲಿ ನೆಕ್ಸ್ಟ್ ಪರೀಕ್ಷೆ ನಡೆಸಲಿದ್ದು, ವೈದ್ಯಕೀಯ ವೃತ್ತಿ ಆರಂಭಕ್ಕೆ ಇದೊಂದು ಲೈಸೆನ್ಸ್ ರೀತಿ ಪರಿಗಣಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ ನಿರ್ಧರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...