ನೋಯ್ಡಾದಲ್ಲಿನ ಸ್ಪೆಕ್ಟ್ರಮ್ ಮಾಲ್‌ನಲ್ಲಿರುವ ಫ್ಲೋಟ್ ಬೈ ಡ್ಯೂಟಿ ಫ್ರೀ ಎಂಬ ರೆಸ್ಟೋರೆಂಟ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ರೆಸ್ಟೋರೆಂಟ್ ನ ಬೌನ್ಸರ್ ಮತ್ತು ಕುಟುಂಬವೊಂದರ ನಡುವೆ ದೊಡ್ಡ ಹೊಡೆದಾಟ ನಡೆದಿದೆ.
ಸೇವಾ ಶುಲ್ಕದ ವಿವಾದವು ಕುಟುಂಬ ಮತ್ತು ಬೌನ್ಸರ್‌ಗಳ ನಡುವೆ ಹಿಂಸಾತ್ಮಕ ಘರ್ಷಣೆಗೆ ಕಾರಣವಾಯಿತು. ಈ ಘಟನೆಯ ವಿಡಿಯೋನ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ.
ಟ್ವೀಟ್ ಪ್ರಕಾರ, ರೆಸ್ಟೋರೆಂಟ್ ಸಿಬ್ಬಂದಿ ಕುಟುಂಬವೊಂದಕ್ಕೆ ಕೆಲವು ಆಹಾರ ಪದಾರ್ಥಗಳನ್ನು ನೀಡಲು ನಿರಾಕರಿಸಿದಾಗ ಗಲಾಟೆ ಪ್ರಾರಂಭವಾಯಿತು. ಇದರಿಂದ ಕುಟುಂಬವು ತಮ್ಮ ಬಿಲ್ ನಲ್ಲಿ ಸೇವಾ ಶುಲ್ಕವನ್ನು ತೆಗೆದುಹಾಕುವಂತೆ ಕೋರಿದಾಗ ಸಿಬ್ಬಂದಿ ಪಟ್ಟುಬಿಡದೆ ನಿರಾಕರಿಸಿದರು. ಇದು ಮಾತಿನ ಚಕಮಕಿಗೆ ಕಾರಣವಾಯಿತು.
ಪರಿಸ್ಥಿತಿಯು ವಿಕೋಪಕ್ಕೆ ತಿರುಗಿ ರೆಸ್ಟೋರೆಂಟ್ ಸಿಬ್ಬಂದಿ ಮತ್ತು ಕುಟುಂಬ ಸದಸ್ಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಮಹಿಳೆಯರೂ ಸಹ ಹಲ್ಲೆ ಮಾಡಿದ್ದು ಕತ್ತು ಹಿಸುಕುವಂತಹ ಕೃತ್ಯ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆರೋಪದ ಬಗ್ಗೆ ರೆಸ್ಟೋರೆಂಟ್ ಇನ್ನೂ ಪ್ರತಿಕ್ರಿಯಿಸಿಲ್ಲ.
https://twitter.com/gharkekalesh/status/1670478724461109248?ref_src=twsrc%5Etfw%7Ctwcamp%5Etweetembed%7Ctwterm%5E1670478724461109248%7Ctwgr%5Eaab84a75dc4f520b64e4bbc0a48c1f231bf7359f%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fwatchviolentclasheruptsbetweenfamilyandrestaurantbouncersoverservicechargeinnoidasspectrummall-newsid-n510610950