HomeKarnatakaBIG NEWS: ಕಾಂಗ್ರೆಸ್ ಕೊಟ್ಟ ಭರವಸೆಯಂತೆ 10 ಕೆಜಿ ಅಲ್ಲ, 15 ಕೆಜಿ ಅಕ್ಕಿ ಕೊಡಲಿ;...

BIG NEWS: ಕಾಂಗ್ರೆಸ್ ಕೊಟ್ಟ ಭರವಸೆಯಂತೆ 10 ಕೆಜಿ ಅಲ್ಲ, 15 ಕೆಜಿ ಅಕ್ಕಿ ಕೊಡಲಿ; ಶಾಸಕ ಬಿ.ವೈ. ವಿಜಯೇಂದ್ರ ಒತ್ತಾಯ

ಶಿವಮೊಗ್ಗ: ಕಾಂಗ್ರೆಸ್ ನವರು ಭರವಸೆ ಕೊಟ್ಟಂತೆ 10 ಕೆಜಿಯಲ್ಲ 15 ಕೆಜಿ ಅಕ್ಕಿ ಕೊಡಲಿ ಎಂದು ಶಾಸಕ ಬಿ.ವೈ. ವಿಜಯೇಂದ್ರ ಕಿಡಿ ಕಾರಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ. ವಿಜಯೇಂದ್ರ, ಕಾಂಗ್ರೆಸ್ ನವರಿಗೆ ಬೇರೆ ರಾಜ್ಯದವರ ಮೇಲೆ ಪ್ರೀತಿ ಜಾಸ್ತಿ. ಅದಕ್ಕೆ ಬೇರೆ ರಾಜ್ಯದಿಂದ ಅಕ್ಕಿ ಖರೀದಿ ಮಾಡಲು ಪ್ಲಾನ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಮ್ಮ ರಾಜ್ಯದಲ್ಲಿಯೇ ಅಕ್ಕಿ, ಗೋಧಿ, ರಾಗಿ ಬೆಳೆಯುತ್ತಾರೆ. ಕೇಂದ್ರ ಸರ್ಕಾರ ಈಗಾಗಲೇ 5 ಕೆಜಿ ಅಕ್ಕಿ ಕೊಡುತ್ತಿದೆ. ಕಾಂಗ್ರೆಸ್ ನವರು ಕೊಟ್ಟ 10 ಕೆಜಿ ಅಕ್ಕಿ ಭರವಸೆಯನ್ನು ಮೊದಲು ಈಡೇರಿಸಲಿ ಎಂದರು.

ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣದ ಬಗ್ಗೆ ಕಾಂಗ್ರೆಸ್ ಸರ್ಕಾರದಿಂದ ತನಿಖೆ ವಿಚಾರವಾಗಿ ಮಾತನಾಡಿದ ಬಿ.ವೈ. ವಿಜಯೇಂದ್ರ, ಯಾವ ತನಿಖೆಯನ್ನಾದರೂ ಮಾಡಲಿ, ತಪ್ಪಾಗಿದ್ದರೆ ಜೈಲಿಗೆ ಕಳಿಸಲಿ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular