HomeInternationalಶೌಚಾಲಯದಲ್ಲಿದ್ದ ಹೆಬ್ಬಾವು ಕಂಡು ಬೆಚ್ಚಿಬಿದ್ದ ಮನೆ ಮಾಲೀಕ....!

ಶೌಚಾಲಯದಲ್ಲಿದ್ದ ಹೆಬ್ಬಾವು ಕಂಡು ಬೆಚ್ಚಿಬಿದ್ದ ಮನೆ ಮಾಲೀಕ….!

ಮನೆಯಂಗಳದಲ್ಲಿ ಹಾವು ಕಂಡಾಗ ಯಾರು ತಾನೇ ಬೆಚ್ಚಿಬೀಳುವುದಿಲ್ಲ ಹೇಳಿ? ಆಸ್ಟ್ರೇಲಿಯಾದ ಕ್ವೀನ್ಸ್‌ಲೆಂಡ್‌ನಲ್ಲಿ ತನ್ನ ಮನೆಯ ಶೌಚಾಲಯದಲ್ಲಿದ್ದ ವೇಳೆ ಶವರ್‌ ಫ್ರೇಂಗೆ ಹೆಬ್ಬಾವೊಂದು ನುಲಿದುಕೊಂಡಿರುವುದನ್ನು ನೋಡಿ ದಂಗು ಬಡಿದ ವ್ಯಕ್ತಿಯೊಬ್ಬರು ಕೂಡಲೇ ಹಾವು ಹಿಡಿಯುವವರನ್ನು ಕರೆಯಿಸಿದ್ದಾರೆ. ’ಹಡ್ಸನ್ ಸ್ನೇಕ್ ಕ್ಯಾಚಿಂಗ್’ ಹೆಸರಿನ ಉರಗ ತಜ್ಞರು ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

“ಕಾರ್ಪೆಟ್ ಹೆಬ್ಬಾವು (ಹೆಸರು) ನಮ್ಮ ಕ್ಲೈಂಟ್‌ ಬಾತ್‌ರೂಮಿಗೆ ಹೋಗಿದ್ದಾಗ ಅವರ ಕಣ್ಣಿಗೆ ಬಿದ್ದಿದೆ. ಆಕ್ಸೆನ್‌ ಫೋರ್ಡ್‌ನಲ್ಲಿರುವ ಮನೆಯೊಂದರಿಂದ ಈ ಹೆಬ್ಬಾವನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಿದ ನಮ್ಮ ಸಿಬ್ಬಂದಿ ಆಂಟೋನಿ ಜಾಕ್ಸನ್‌ಗೆ ಧನ್ಯವಾದ,” ಎಂದು ಹಡ್ಸನ್ ಸ್ನೇಕ್ ಕ್ಯಾಚಿಂಗ್ ಫೇಸ್ಬುಕ್‌ನಲ್ಲಿ ಪೋಸ್ಟ್ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular