HomeAgricultureBIG NEWS: ಕೇಂದ್ರ, ಹೊರ ರಾಜ್ಯಗಳ ಬದಲು ರಾಜ್ಯದ ರೈತರ ಬಳಿ ಅಕ್ಕಿ ಖರೀದಿಸಿ; ಸಿಎಂ...

BIG NEWS: ಕೇಂದ್ರ, ಹೊರ ರಾಜ್ಯಗಳ ಬದಲು ರಾಜ್ಯದ ರೈತರ ಬಳಿ ಅಕ್ಕಿ ಖರೀದಿಸಿ; ಸಿಎಂ ಸಿದ್ದರಾಮಯ್ಯಗೆ ರೈತ ಮುಖಂಡರ ಮನವಿ

ಬೆಂಗಳೂರು: ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡಲು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ತಿರಸ್ಕರಿಸಿದೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಬೆನ್ನಲ್ಲೇ ರಾಜ್ಯದ ರೈತರಿಂದಲೇ ಅಕ್ಕಿ ಖರೀದಿ ಮಾಡುವಂತೆ ರೈತ ಮುಖಂಡರು ಆಗ್ರಹಿಸಿದ್ದಾರೆ.

ಈ ಕುರಿತು ರೈತ ಮುಖಂಡ ಕುರಬೂರು ಶಾಂತಕುಮಾರ್, ಸಿಎಂ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದು, ಕೇಂದ್ರ, ಹೊರ ರಾಜ್ಯಗಳ ಬದಲು ರಾಜ್ಯದ ರೈತರ ಬಳಿಯೇ ಅಕ್ಕಿ ಖರೀದಿ ಮಾಡುವಂತೆ ಮನವಿ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದ ರೈತರಿಂದ ಭತ್ತ, ರಾಗಿ, ಜೋಳವನ್ನು ನೇರವಾಗಿ ಖರೀದಿಸಿ ಅನ್ನಭಾಗ್ಯ ಯೋಜನೆಗಾಗಿ ಬಳಸಿ. ಇದರಿಂದ ರಾಜ್ಯದ ರೈತರು, ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಉಚಿತ ವಿದ್ಯುತ್ ವಿಚಾರವನ್ನೂ ಪ್ರಸ್ತಾಪಿಸಿರುವ ಶಾಂತಕುಮಾರ್, ಉಚಿತ ವಿದ್ಯುತ್ ಬದಲಾಗಿ ಪ್ರತಿ ಮನೆಗೂ ಸೋಲಾರ್ ವ್ಯವಸ್ಥೆ ಕಲ್ಪಿಸಿ ಎಂದು ಸಲಹೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular