ದಕ್ಷಿಣ ಆಫ್ರಿಕಾದ ಕ್ರುಗರ್ ರಾಷ್ಟ್ರೀಯ ಉದ್ಯಾನ ತನ್ನ ಜೀವವೈವಿಧ್ಯದಿಂದ ಭಾರೀ ಹೆಸರು ಪಡೆದಿದೆ. ಈ ಉದ್ಯಾನಕ್ಕೆ ಭಾರೀ ಸಂಖ್ಯೆಯಲ್ಲಿ ವಿದೇಶೀ ಪ್ರವಾಸಿಗರು ಭೇಟಿ ನೀಡುತ್ತಾರೆ.
ಭಾರೀ ಪ್ರವಾಸಿಗರಿದ್ದ ಕಾರಣ ಸಫಾರಿಗೆ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದ ವಾಹನಗಳ ನಡುವೆಯೇ ಕಾಡಿನ ರಸ್ತೆಯಲ್ಲಿ ಸಿಂಹಿಣಿಯೊಂದು ತನ್ನ ಮರಿಯನ್ನು ಬಾಯಿಯಲ್ಲಿ ಕಚ್ಚಿಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ಉದ್ಯಾನದಲ್ಲಿ ಹಾದು ಹೋಗುವ ಎಸ್65 ಹೆಸರಿನ ಮಣ್ಣಿನ ರಸ್ತೆಯಲ್ಲಿ ಸಫಾರಿ ಮಾಡುವುದು ವನ್ಯಜೀವಿ ಉತ್ಸಾಹಿಗಳಿಗೆ ಅಚ್ಚುಮೆಚ್ಚಿನ ಚಟುವಟಿಕೆಗಳಲ್ಲಿ ಒಂದಾಗಿದೆ. ಕೆಲವೇ ದಿನಗಳ ಹಿಂದೆ ಜನಿಸಿದ ತನ್ನ ಮರಿಯನ್ನು ಈ ಪಾಟಿ ಜನದಟ್ಟಣೆಯ ನಡುವೆ ಸುರಕ್ಷಿತವಾಗಿ ತನ್ನ ಜಾಗಕ್ಕೆ ಕೊಂಡೊಯುತ್ತಿರುವ ಸಿಂಹಿಣಿಯ ಅಪರೂಪದ ದೃಶ್ಯವನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯಲು ವನ್ಯಜೀವಿ ಛಾಯಾಗ್ರಹಣ ಉತ್ಸಾಹಿಗಳು ಮುಂದಾಗಿರುವುದನ್ನು ಸಹ ವಿಡಿಯೋದಲ್ಲಿ ನೋಡಬಹುದಾಗಿದೆ.