HomeEntertainment'ಕಂಗನಾ ರಣಾವತ್' ಮೊದಲ ಬಾರಿಗೆ ನಿರ್ಮಾಪಕಿಯಾಗಿರುವ 'ಟಿಕು ವೆಡ್ಸ್ ಶೇರು' ಟ್ರೇಲರ್ ರಿಲೀಸ್

‘ಕಂಗನಾ ರಣಾವತ್’ ಮೊದಲ ಬಾರಿಗೆ ನಿರ್ಮಾಪಕಿಯಾಗಿರುವ ‘ಟಿಕು ವೆಡ್ಸ್ ಶೇರು’ ಟ್ರೇಲರ್ ರಿಲೀಸ್

ಜೋಗಿರಾ ಸರ ರಾ ರಾ ಚಿತ್ರದ ನಂತರ ನಟ ನವಾಜುದ್ದೀನ್ ಸಿದ್ದಿಕಿ ಅವರು ಟಿಕು ವೆಡ್ಸ್ ಶೇರು ಎಂಬ ಮತ್ತೊಂದು ಕಮರ್ಷಿಯಲ್ ಚಿತ್ರದೊಂದಿಗೆ ಮರಳಿದ್ದಾರೆ. ಅವನೀತ್ ಕೌರ್ ಸಹ ಇದರಲ್ಲಿ ನಟಿಸಿದ್ದು ಟ್ರೇಲರ್ ಬಿಡುಗಡೆಯಾಗಿದೆ.

ಮುಂಬೈ ಮತ್ತು ಭೋಪಾಲ್‌ನಲ್ಲಿ ಜರುಗುವ ಹಾಸ್ಯಮಯ ಕಥೆಯನ್ನ ಚಿತ್ರ ಒಳಗೊಂಡಿದೆ. 49 ವರ್ಷದ ನವಾಜುದ್ದೀನ್, 21 ವರ್ಷದ ಅವನೀತ್ ನಡುವಿನ ಗಮನಾರ್ಹ ವಯಸ್ಸಿನ ವ್ಯತ್ಯಾಸದ ಹೊರತಾಗಿಯೂ ಅವರನ್ನು ಚಿತ್ರದಲ್ಲಿ ಜೋಡಿಯಾಗಿ ತೋರಿಸಲಾಗಿದೆ.

ಈ ಚಿತ್ರದ ಮೂಲಕ ಕಂಗನಾ ರಣಾವತ್ ನಿರ್ಮಾಪಕಿಯಾಗಿದ್ದು, ಮೊದಲ ಚಿತ್ರ ನಿರ್ಮಿಸಿದ್ದಾರೆ.
ಬಿಡುಗಡೆಯಾಗಿರುನ ಟ್ರೇಲರ್‌ನಲ್ಲಿ ಕಂಗನಾರನ್ನು ‘ಸೃಜನಶೀಲ ನಿರ್ಮಾಪಕಿ’ ಎಂದು ಹೆಸರಿಸಲಾಗಿದೆ. ಜೂನ್ 23 ರಂದು ಪ್ರೈಮ್ ವಿಡಿಯೋದಲ್ಲಿ ಟಿಕು ವೆಡ್ಸ್ ಶೇರು ಅಬ್ಬರ ಶುರುವಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular