alex Certify 51 ಟ್ರ್ಯಾಕ್ಟರ್ ಗಳಲ್ಲಿ ಹೊರಟ ಮದುವೆ ಮೆರವಣಿಗೆ; ರೈತ ಕುಟುಂಬದ ವಿಭಿನ್ನ ಯೋಜನೆಯ ಸಂಭ್ರಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

51 ಟ್ರ್ಯಾಕ್ಟರ್ ಗಳಲ್ಲಿ ಹೊರಟ ಮದುವೆ ಮೆರವಣಿಗೆ; ರೈತ ಕುಟುಂಬದ ವಿಭಿನ್ನ ಯೋಜನೆಯ ಸಂಭ್ರಮ

Unique Wedding Procession In Rajasthan's Barmer, Groom Comes With 51 Tractors

ರಾಜಸ್ಥಾನದ ಬಾರ್ಮರ್‌ನಲ್ಲಿ ಮದುವೆ ಸಮಾರಂಭವೊಂದು ಎಲ್ಲರ ಕಣ್ಮನ ಸೆಳೆದಿದೆ. 51 ಟ್ರ್ಯಾಕ್ಟರ್ ಗಳು ಮದುವೆ ಮೆರವಣಿಗೆ ಹೊರಟಿದ್ದೇ ವಿಶೇಷ. ಅದರಲ್ಲಿ ಒಂದು ಟ್ರ್ಯಾಕ್ಟರನ್ನು ಖುದ್ದು ವರ ಚಲಾಯಿಸಿದ್ದಾರೆ.

ತಮ್ಮ ಮದುವೆಯಲ್ಲಿ ಒಂದು ಟ್ರ್ಯಾಕ್ಟರ್ ನಲ್ಲಿ ಮೆರವಣಿಗೆ ಹೊರಟಿದ್ದೆವು. ಇದೀಗ ನನ್ನ ಮಗನ ಮದುವೆಗೆ 51 ಟ್ರ್ಯಾಕ್ಟರ್ ಗಳನ್ನು ಮೆರವಣಿಗೆಗಾಗಿ ತಂದಿದ್ದೇವೆಂದು ವರನ ತಂದೆ ಹೇಳಿದ್ದಾರೆ.

ಗುಡಮಲಾನಿ ಗ್ರಾಮದವರಾದ ಪ್ರಕಾಶ್ ಚೌಧರಿ ಅವರು ರೋಲಿ ಗ್ರಾಮದ ಮಮತಾ ಅವರನ್ನು ವಿವಾಹವಾಗಿದ್ದಾರೆ. ಮದುವೆ ಮೆರವಣಿಗೆಯು ವರನ ಮನೆಯಿಂದ 51 ಕಿಲೋಮೀಟರ್ ದೂರದಲ್ಲಿರುವ ರೋಲಿ ಗ್ರಾಮಕ್ಕೆ ಹೊರಟಿತು. 51 ಟ್ರ್ಯಾಕ್ಟರ್‌ಗಳಲ್ಲಿ 200ಕ್ಕೂ ಹೆಚ್ಚು ಸಂಬಂಧಿಕರಿದ್ದರು. ವರನು ಈ ಬಗ್ಗೆ ಮಾತನಾಡಿ, ತನ್ನ ಕುಟುಂಬದ ಪ್ರಧಾನ ಉದ್ಯೋಗ ಕೃಷಿಯಾಗಿದ್ದು ಟ್ರಾಕ್ಟರ್ ಅನ್ನು ರೈತನ ಮನ್ನಣೆ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದರು.

ವರನ ತಂದೆ ಜೇಥರಾಮ್ ಮಾತಾಡ್ತಾ, ಟ್ರಾಕ್ಟರ್ ಅನ್ನು ‘ಭೂಮಿಯ ಮಗ’ ಎಂದು ಪರಿಗಣಿಸಲಾಗುತ್ತದೆ. ನನ್ನ ತಂದೆ ಮತ್ತು ಅಜ್ಜನ ಮದುವೆ ಮೆರವಣಿಗೆ ಒಂಟೆಗಳ ಮೇಲೆ ಸಾಗಿತು. ನಾವು ಈಗಾಗಲೇ ನಮ್ಮ ಕುಟುಂಬದಲ್ಲಿ 20-30 ಟ್ರ್ಯಾಕ್ಟರ್‌ಗಳನ್ನು ಹೊಂದಿದ್ದೇವೆ. ನಮ್ಮ ಸ್ನೇಹಿತರ ಜೊತೆ ಸೇರಿ 51 ಟ್ರ್ಯಾಕ್ಟರ್ ಗಳಲ್ಲಿ ಮೆರವಣಿಗೆಗೆ ಹೊರಟೆವು. ಟ್ರ್ಯಾಕ್ಟರ್ ಮೂಲಕ ಕೃಷಿ ಮಾಡುತ್ತೇವೆ, ಆದರೆ ಟ್ರ್ಯಾಕ್ಟರ್ ನಲ್ಲೇಕೆ ಮದುವೆ ಮೆರವಣಿಗೆ ಹೋಗಬಾರದು? ಎಂದು ಅವರು ಪ್ರಶ್ನಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...