HomeInternationalನೈಜೀರಿಯಾದಲ್ಲಿ ಘೋರ ದುರಂತ: ಮದುವೆ ದಿಬ್ಬಣದ ದೋಣಿ ಮಗುಚಿ 100ಕ್ಕೂ ಹೆಚ್ಚು ಜನ ಸಾವು

ನೈಜೀರಿಯಾದಲ್ಲಿ ಘೋರ ದುರಂತ: ಮದುವೆ ದಿಬ್ಬಣದ ದೋಣಿ ಮಗುಚಿ 100ಕ್ಕೂ ಹೆಚ್ಚು ಜನ ಸಾವು

ಉತ್ತರ ಮಧ್ಯ ನೈಜೀರಿಯಾದಲ್ಲಿ ಮದುವೆಯಿಂದ ಹಿಂದಿರುಗುತ್ತಿದ್ದ ಕುಟುಂಬಗಳನ್ನು ಸಾಗಿಸುತ್ತಿದ್ದ ದೋಣಿ ನದಿಯಲ್ಲಿ ಮುಳುಗಿದೆ. ದುರಂತದಲ್ಲಿ 100 ಕ್ಕೂ ಹೆಚ್ಚು ಜನರು ಮುಳುಗಿದ್ದಾರೆ ಎಂದು ಪೊಲೀಸರು ಮತ್ತು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಕ್ವಾರಾ ರಾಜ್ಯದಲ್ಲಿ ಅಪಘಾತ ನಡೆದಿದೆ. ಓವರ್‌ಲೋಡ್, ಸುರಕ್ಷತಾ ಕಾರ್ಯವಿಧಾನ ಸರಿಯಾಗಿಲ್ಲದಿರುವುದು, ಮಳೆಗಾಲದಲ್ಲಿ ಭಾರೀ ಪ್ರವಾಹದಿಂದಾಗಿ ದೋಣಿ ಮುಳುಗಿದೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೆರೆಯ ನೈಜರ್ ರಾಜ್ಯದಲ್ಲಿನ ಮದುವೆಯಿಂದ ಕ್ವಾರಾ ರಾಜ್ಯದ ಜನರನ್ನು ಕರೆದೊಯ್ಯುತ್ತಿದ್ದಾಗ ದೋಣಿ ನದಿಯ್ಲಲಿ ಮುಳುಗಿದೆ. ಇಲ್ಲಿಯವರೆಗೆ 103 ಜನರು ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಜನರನ್ನು ದೋಣಿ ಅಪಘಾತದಿಂದ ರಕ್ಷಿಸಲಾಗಿದೆ ಎಂದು ಕ್ವಾರಾ ರಾಜ್ಯ ಪೊಲೀಸ್ ವಕ್ತಾರ ಒಕಾಸನ್ಮಿ ತಿಳಿಸಿದ್ದಾರೆ.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ. ನೈಜರ್ ನದಿಯು ಪಶ್ಚಿಮ ಆಫ್ರಿಕಾದ ಮುಖ್ಯ ಜಲಮಾರ್ಗವಾಗಿದ್ದು, ಗಿನಿಯಾದ ಮೂಲಕ ನೈಜೀರಿಯಾದ ನೈಜರ್ ಡೆಲ್ಟಾದವರೆಗೆ ಅರ್ಧಚಂದ್ರಾಕೃತಿಯಲ್ಲಿ ಸಾಗುತ್ತದೆ. ಇದು ಕೆಲವು ದೇಶಗಳಿಗೆ ಪ್ರಮುಖ ಸ್ಥಳೀಯ ವ್ಯಾಪಾರ ಮಾರ್ಗವಾಗಿದೆ. ನೈಜೀರಿಯಾದ ರಾಷ್ಟ್ರೀಯ ಒಳನಾಡು ಜಲಮಾರ್ಗಗಳ ಪ್ರಾಧಿಕಾರ ಅಪಘಾತಗಳನ್ನು ತಡೆಯಲು ನದಿಗಳಲ್ಲಿ ರಾತ್ರಿ-ಸಮಯದ ನೌಕಾಯಾನ, ಓವರ್ ಲೋಡ್ ನಿಷೇಧಿಸಲು ಕ್ರಮಕೈಗೊಳ್ಳಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular