HomeEntertainmentನಟಿ ದೀಪಿಕಾಳಂತೆ 'ಬೇಷರಮ್' ಹಾಡಿಗೆ ಡಾನ್ಸ್ ಮಾಡಿದ ಪುಟಾಣಿ: ಮುದ್ದು ಮುದ್ದಾಗಿರೋ ವಿಡಿಯೋಗೆ ನೆಟ್ಟಿಗರು ಫುಲ್...

ನಟಿ ದೀಪಿಕಾಳಂತೆ ‘ಬೇಷರಮ್’ ಹಾಡಿಗೆ ಡಾನ್ಸ್ ಮಾಡಿದ ಪುಟಾಣಿ: ಮುದ್ದು ಮುದ್ದಾಗಿರೋ ವಿಡಿಯೋಗೆ ನೆಟ್ಟಿಗರು ಫುಲ್ ಫಿದಾ

‘ಪಠಾಣ್’ ಸಿನೆಮಾ ಬಿಡುಗಡೆಯಾಗಿ ಹೆಚ್ಚು-ಕಡಿಮೆ 5 ತಿಂಗಳಾಗ್ತಾ ಬಂತು. ಆದರೆ ಸಿನೆಮಾ ಕ್ರೇಜ್ ಮಾತ್ರ ಇನ್ನೂ ಕಡಿಮೆ ಆಗಿಲ್ಲ. ಅದರಲ್ಲೂ ನಟ ಶಾರುಖ್‌ ಖಾನ್‌ ಹಾಗೂ ನಟಿ ದೀಪಿಕಾ ಪಡುಕೋಣೆ ನಟಿಸಿದ್ದ ‘ಬೇಷರಮ್’ ಹಾಡು ಹಾಗೂ ಡಾನ್ಸ್ ಅಭಿಮಾನಿಗಳಿಗೆ ಇವತ್ತಿಗೂ ಫೆವರೇಟ್ ಆಗಿದೆ.

ಇದೇ ‘ಬೇಷರಮ್ ‘ಹಾಡಿಗೆ, ಅಭಿಮಾನಿಗಳು ಡಾನ್ಸ್ ಮಾಡಿರೋ ವಿಡಿಯೋಗಳು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾನೇ ಇರುತ್ತೆ. ಈಗ ಇದೇ ಹಾಡಿನ ವಿಡಿಯೋ ಒಂದು ನೆಟ್ಟಿಗರ ಗಮನ ಸೆಳೆಯುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಷ್ಟಕ್ಕೂ ಈ ಹಾಡಿಗೆ ಈಗ ಡಾನ್ಸ್ ಮಾಡಿರೋದಾದ್ರೂ ಯಾರೂ ಗೊತ್ತಾ ಪುಟಾಣಿ ಬಾಲೆ. ಇನ್ ಸ್ಟಾಗ್ರಾಮ್‌ನ ಏರೊನಿಕ್ ಲೈಫ್ ಅನ್ನೋ ಅಕೌಂಟ್‌ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಪುಟಾಣಿ, ಟಿವಿಯಲ್ಲಿ ದೀಪಿಕಾ ಪಡುಕೋಣೆ ಬೇಷರಮ್ ಹಾಡಿಗೆ ನೃತ್ಯ ಮಾಡುತ್ತಿರುವ ಹಾಗೆಯೇ ತಾನು ನೃತ್ಯ ಮಾಡುವ ಪ್ರಯತ್ನ ಮಾಡುತ್ತಿದ್ದಾಳೆ.

ಮುದ್ದುಮುದ್ದಾಗಿ ಆಕೆ ಮಾಡುವ ಹಾವಭಾವಗಳು ನೋಡುವುದೇ ಚೆಂದ. ನೆಟ್ಟಿಗರಂತೂ ಈ ವಿಡಿಯೋ ನೋಡಿ, ಪುಟಾಣಿಗೆ ಪ್ರೀತಿಯ ಮಳೆಗೆರೆಯುತ್ತಿದ್ದಾರೆ. ಈ ಪುಟಾಣಿಯ ಡಾನ್ಸ್ ನೋಡುವುದೇ ಚೆಂದ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular