alex Certify ತಂಪು ಪಾನೀಯದ ಬಾಟಲಿಯನ್ನು ಏಕೆ ಪೂರ್ತಿಯಾಗಿ ತುಂಬಿಸುವುದಿಲ್ಲ…..? ಇದಕ್ಕೂ ಇದೆ ವೈಜ್ಞಾನಿಕ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂಪು ಪಾನೀಯದ ಬಾಟಲಿಯನ್ನು ಏಕೆ ಪೂರ್ತಿಯಾಗಿ ತುಂಬಿಸುವುದಿಲ್ಲ…..? ಇದಕ್ಕೂ ಇದೆ ವೈಜ್ಞಾನಿಕ ಕಾರಣ

ಬೇಸಿಗೆಯಲ್ಲಿ ತಂಪು ಪಾನೀಯವನ್ನು ಹೆಚ್ಚು ಸೇವಿಸಲಾಗುತ್ತದೆ. ಅದನ್ನು ಎಲ್ಲರೂ ಖರೀದಿಸಿ ಕುಡಿಯುತ್ತಾರೆಯೇ ವಿನಃ ಬಾಟಲಿಗೆ ಸಂಬಂಧಿಸಿದ ಇಂಟ್ರೆಸ್ಟಿಂಗ್‌ ವಿಷಯಗಳನ್ನು ಗಮನಿಸುವುದಿಲ್ಲ. ಇದು ಕೇವಲ ಒಂದು ಬ್ರಾಂಡ್ ಕೋಲ್ಡ್‌ ಡ್ರಿಂಕ್ಸ್‌ಗೆ ಸಂಬಂಧಪಟ್ಟಿದ್ದಲ್ಲ. ಪ್ರಪಂಚದ ಪ್ರತಿಯೊಂದು ತಂಪು ಪಾನೀಯದ ಬಾಟಲಿಯನ್ನು ಪೂರ್ತಿಯಾಗಿ ತುಂಬಿಸುವುದಿಲ್ಲ.  ಇದರ ಹಿಂದೆ ವೈಜ್ಞಾನಿಕ ಕಾರಣವಿದೆ.

ಸಾಮಾನ್ಯವಾಗಿ ತಂಪು ಪಾನೀಯಗಳು ಪ್ಲಾಸ್ಟಿಕ್ ಬಾಟಲಿಯಲ್ಲಿ ಬರುತ್ತವೆ. ಬಾಟಲಿಯ ಕ್ಯಾಪ್‌ವರೆಗೂ ಅದನ್ನು ತುಂಬಿಸುವುದಿಲ್ಲ. ಸ್ವಲ್ಪ ಜಾಗವನ್ನು ಬಿಟ್ಟಿರುತ್ತಾರೆ. ಬಾಟಲಿಯ ಕ್ಯಾಪ್ ಮತ್ತು ದ್ರವದ ನಡುವೆ ಖಾಲಿ ಜಾಗವಿಲ್ಲದಿದ್ದರೆ ಬಾಟಲಿಯು ಸಿಡಿಯುವ ಅಪಾಯವಿದೆ. ತಂಪು ಪಾನೀಯಗಳನ್ನು ಪ್ಯಾಕ್ ಮಾಡುವಾಗ, ಕೋಣೆಯ ಉಷ್ಣಾಂಶಕ್ಕಿಂತ ಕಡಿಮೆ ತಂಪಾಗಿಸಿದ ನಂತರ ಅವುಗಳನ್ನು ಪ್ಯಾಕ್ ಮಾಡಲಾಗುತ್ತದೆ.

ನಂತರ ಅನೇಕ ಬಾರಿ ಬಾಟಲಿಗಳನ್ನು ಸೂರ್ಯನ ಬಿಸಿಲಲ್ಲಿ ಅಥವಾ ಯಾವುದೇ ರೀತಿಯ ಬಿಸಿ ತಾಪಮಾನದಲ್ಲಿ ಬಿಡಲಾಗುತ್ತದೆ. ಈ ಕಾರಣದಿಂದಾಗಿ ಬಾಟಲಿಯ ತಾಪಮಾನದಲ್ಲಿ ದೊಡ್ಡ ಬದಲಾವಣೆ ಕಂಡುಬರುತ್ತದೆ. ತಂಪು ಪಾನೀಯದಲ್ಲಿ ಕಾರ್ಬನ್ ಡೈಆಕ್ಸೈಡ್ ನಂತಹ ಅನಿಲವಿರುತ್ತದೆ. ಇದರಿಂದಾಗಿ ಬಾಟಲಿಯ ಉಷ್ಣತೆ ಹೆಚ್ಚಾದ ತಕ್ಷಣ ಗ್ಯಾಸ್ ಹೊರಬರುತ್ತದೆ ಮತ್ತು ಪಾನೀಯವೂ ಹೊರಬರುತ್ತದೆ. ಈ ಕಾರಣದಿಂದಾಗಿ ಬಾಟಲಿಯನ್ನು ಸಂಪೂರ್ಣವಾಗಿ ತುಂಬಿಸುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...