
ಸಮುದ್ರದಲ್ಲಿ ಆಳೆತ್ತರದ ಅಲೆಗಳು ಏಳುತ್ತಿದ್ದು, ಬೃಹತ್ ಅಲೆಗಳು ಕಡಲತಡಿಗೆ ಅಪ್ಪಳಿಸುತ್ತಿವೆ. ಅಲೆಗಳ ಹೊಡೆತಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ ಕಡಲ ತಡಿಯಲ್ಲಿ ಮನೆಗಳು, ಕಟ್ಟಡಗಳು ನೆಲಸಮವಾಗಿವೆ. ತೆಂಗಿನ ಮರಗಳು ಧರೆಗುರುಳಿವೆ.
ಚಂಡಮಾರುತದಿಂದಾಗಿ ಮಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಕಟ್ಟೆಚ್ಚರಕ್ಕೆ ಸೂಚಿಸಲಾಗಿದೆ. ಉತ್ತರ ಕನ್ನಡ, ಉಡುಪಿ ಜಿಲ್ಲೆಗಳಲ್ಲಿಯೂ ಇಂದು ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

