ನಟ ಶಾರುಖ್ ಖಾನ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಐಕಾನಿಕ್ ರೊಮ್ಯಾಂಟಿಕ್ ಭಂಗಿಯನ್ನು ಅನುಕರಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ರಚಿಸಿದ್ದಾರೆ. ‘ಕಿಂಗ್ ಆಫ್ ರೋಮ್ಯಾನ್ಸ್’ ಎಂದು ಅಭಿಮಾನಿಗಳಿಂದ ಬಿರುದು ಪಡೆದಿರುವ ಪಠಾಣ್ ಚಿತ್ರದ ನಟ ಶಾರುಖ್ ವಿಶ್ವದಾಖಲೆ ವೇಳೆ ತಮ್ಮ ಮನ್ನತ್ ನಿವಾಸದ ಹೊರಗೆ ಜಮಾಯಿಸಿದ್ದ ಅಭಿಮಾನಿಗಳಿಗೆ ದರ್ಶನ ನೀಡಿ ತಾವೂ ಕೂಡ ತಮ್ಮ ಐಕಾನಿಕ್ ರೊಮ್ಯಾಂಟಿಕ್ ಭಂಗಿಯನ್ನು ಪ್ರದರ್ಶಿಸಿದರು.
ಶನಿವಾರ ಶಾರುಖ್ ಅಭಿಮಾನಿಗಳು ಮುಂಬೈನಲ್ಲಿರುವ ಮನ್ನತ್ ಹೊರಗೆ ಜಮಾಯಿಸಿ ಶಾರುಖ್ ಅವರ ಐಕಾನಿಕ್ ರೊಮ್ಯಾಂಟಿಕ್ ಭಂಗಿಯನ್ನು ಪ್ರದರ್ಶಿಸಿದರು. ಇದು ಎಸ್‌ಆರ್‌ಕೆಯನ್ನು ಅನುಕರಿಸುವ ಗರಿಷ್ಠ ಜನರ ವಿಶ್ವ ದಾಖಲೆಯಾಗಿದೆ. ಈ ವೇಳೆ ಶಾರುಖ್ ಹೊರಬಂದು ಬಾಲ್ಕನಿಯಿಂದ ಅಭಿಮಾನಿಗಳನ್ನು ಹುರಿದುಂಬಿಸಿ ಫ್ಲೈಯಿಂಗ್ ಕಿಸ್ ನೀಡಿದರು.