HomeKarnatakaBIG NEWS: BMTC ಬಸ್ ನಲ್ಲಿ ವಿಧಾನಸೌಧದಿಂದ ಮೆಜೆಸ್ಟಿಕ್ ಗೆ ಜೊತೆಯಾಗಿ ಪ್ರಯಾಣಿಸಿದ CM-DCM; ಸಚಿವರು,...

BIG NEWS: BMTC ಬಸ್ ನಲ್ಲಿ ವಿಧಾನಸೌಧದಿಂದ ಮೆಜೆಸ್ಟಿಕ್ ಗೆ ಜೊತೆಯಾಗಿ ಪ್ರಯಾಣಿಸಿದ CM-DCM; ಸಚಿವರು, ಅಧಿಕಾರಿಗಳು ಸಾಥ್

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ಗ್ಯಾರಂಟಿ ಯೋಜನೆ ಶಕ್ತಿ ಯೋಜನೆಗೆ ಚಾಲನೆ ನೀಡಿದ ಬಳಿಕ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಬಿಎಂಟಿಸಿ ಬಸ್ ನಲ್ಲಿ ಜೊತೆಯಾಗಿ ಮೆಜೆಸ್ಟಿಕ್ ಗೆ ಪ್ರಯಾಣಿಸಿದ್ದಾರೆ.

ವಿಧಾನಸೌಧದಿಂದ ಮೆಜೆಸ್ಟಿಕ್ ಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಬಿಎಂಟಿಸಿ ಬಸ್ ನಲ್ಲಿ ಅಕ್ಕಪಕ್ಕದ ಸೀಟ್ ನಲ್ಲಿ ಕುಳಿತು ಮಹಿಳಾ ಪ್ರಯಾಣಿಕರ ಜೊತೆ ಪ್ರಯಾಣಿಸಿದ್ದು, ಸಚಿವರು, ಅಧಿಕಾರಿಗಳು ಕೂಡ ಬಸ್ ನಲ್ಲಿಯೇ ತೆರಳಿದ್ದಾರೆ.

ಬಿಎಂಟಿಸಿ ಡಿಪೋ 10ರ ಕೆ ಎ 57 ಎಫ್ 5324 ಸಂಖ್ಯೆಯ ಬಸ್ ನಲ್ಲಿ ಪ್ರಯಾಣಿಸಿದ್ದು,ಮೆಜೆಸ್ಟಿಕ್ ನಲ್ಲಿ ಮಹಿಳೆಯರಿಗೆ ಶೂನ್ಯ ದರದ ಟಿಕೆಟ್ ವಿತರಿಸುವ ಮೂಲಕ ಉಚಿತ ಬಸ್ ಪ್ರಯಾಣಕ್ಕೆ ಚಾಲನೆ ನೀಡಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular