HomeInternationalನಾಪತ್ತೆಯಾದ 9 ವರ್ಷದ ಬಳಿಕ ಮನೆ ಗೋಡೆಯಲ್ಲಿ ಯುವತಿಯ ಅವಶೇಷ ಪತ್ತೆ; ಗೆಳತಿಯ ದೇಹವನ್ನ ಆಸಿಡ್...

ನಾಪತ್ತೆಯಾದ 9 ವರ್ಷದ ಬಳಿಕ ಮನೆ ಗೋಡೆಯಲ್ಲಿ ಯುವತಿಯ ಅವಶೇಷ ಪತ್ತೆ; ಗೆಳತಿಯ ದೇಹವನ್ನ ಆಸಿಡ್ ನಿಂದ ಕರಗಿಸಿದ್ದ ಬಾಯ್ ಫ್ರೆಂಡ್

ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದ ಸಂಗಾತಿಯನ್ನು ಭೀಕರವಾಗಿ ಹತ್ಯೆ ಮಾಡಿ ಫ್ರಿಡ್ಜ್ ನಲ್ಲಿಡುವುದು, ಕುಕ್ಕರ್ ನಲ್ಲಿ ಬೇಯಿಸುವಂತಹ ಪ್ರಕರಣಗಳ ವರದಿಯಾಗುತ್ತಿರುವ ಹೊತ್ತಲ್ಲೇ ಸ್ಪೇನ್ ನಲ್ಲಿ ಇಂಥದ್ದೇ ಪ್ರಕರಣ ವರದಿಯಾಗಿದ್ದು ಬೆಚ್ಚಿಬೀಳಿಸಿದೆ.

ಭಯಾನಕ ಘಟನೆಯೊಂದರಲ್ಲಿ ಸ್ಪ್ಯಾನಿಷ್ ಪೊಲೀಸರು 9 ವರ್ಷಗಳಿಂದ ನಾಪತ್ತೆಯಾಗಿದ್ದ ಯುವತಿಯ ಶವವನ್ನು ಹಳೆಯ ಅಪಾರ್ಟ್ಮೆಂಟ್ ನ ಗೋಡೆಯ ಹಿಂದೆ ಪತ್ತೆ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

22 ವರ್ಷದ ಸಿಬೊರಾ ಗಗಾನಿ ತನ್ನ ಗೆಳೆಯನಿಂದ ಬೇರ್ಪಟ್ಟ ಸ್ವಲ್ಪ ಸಮಯದ ನಂತರ ಒಂಬತ್ತು ವರ್ಷಗಳ ಹಿಂದೆ ಕಣ್ಮರೆಯಾಗಿದ್ದರು. ಟೊರೆಮೊಲಿನೋಸ್ ಮುನ್ಸಿಪಲ್ ಪೊಲೀಸರಿಗೆ ಯುವತಿ ಬಗ್ಗೆ ಯಾವುದೇ ಮಾಹಿತಿ ಸಿಗದಿದ್ದಾಗ ಹುಡುಕಾಟ ಕೈಬಿಟ್ಟರು. ಕಳೆದ ತಿಂಗಳು ಪೊಲೀಸರು ಆಕೆಯ ಪ್ರಿಯಕರನನ್ನು ಹಿಡಿದಾಗ ಯುವತಿಗೆ 14 ಬಾರಿ ಇರಿದಿರುವುದಾಗಿ ಪೊಲೀಸರಿಗೆ ತಿಳಿಸಿದ್ದ.

ಆರೋಪಿ ಮಾರ್ಕೊ ಗೈಯೊ ರೋಮಿಯೊ 2014 ರಲ್ಲಿ ಯುವತಿಯನ್ನು ಕೊಂದ ಅಪರಾಧವನ್ನು ಸ್ವತಃ ಒಪ್ಪಿಕೊಂಡಿದ್ದ. ರೋಮಿಯೋ, ಸಿಬೊರಾಳ ದೇಹದ ಅವಶೇಷಗಳನ್ನು ಆಸಿಡ್ ಹಾಕಿ ಕರಗಿಸಿದ್ದಾಗಿ ಹೇಳಿದ. ಸ್ಪ್ಯಾನಿಷ್ ಪೊಲೀಸರು ನೀಡಿದ ಹೇಳಿಕೆಯ ಪ್ರಕಾರ ರೋಮಿಯೋ, ಸಿಬೊರಾಳ ಅವಶೇಷಗಳನ್ನು ಪೆಟ್ಟಿಗೆಯಲ್ಲಿ ಇರಿಸಿ ಅದನ್ನು ಅವನು ತನ್ನ ಮನೆಯ ಗೋಡೆಯಲ್ಲಿ ಮರೆಮಾಡಿದ್ದನು.

ರೋಮಿಯೋ ಮತ್ತು ಸಿಬೋರಾ ವಾಸಿಸುತ್ತಿದ್ದ ಅಪಾರ್ಟ್ಮೆಂಟ್ ಅನ್ನು ಶೋಧಿಸಿದ ನಂತರ ಗೋಡೆಯೊಳಗೆ ಅವಶೇಷ ಪತ್ತೆಯಾಗಿತ್ತು. ಎನ್‌ಎ ಪರೀಕ್ಷೆಯ ಮೂಲಕ ಗುರುತನ್ನು ಪರಿಶೀಲಿಸುವ ಸಲುವಾಗಿ ಪೊಲೀಸರು ಮೃತದೇಹದ ಅವಶೇಷಗಳನ್ನು ಶವಾಗಾರಕ್ಕೆ ಕೊಂಡೊಯ್ದರು.

For Latest News Updates, Join Our Whatsapp Community🚩
RELATED ARTICLES

Most Popular