HomeAgricultureBIG NEWS: ನಾಳೆಯಿಂದಲೇ ರೈತರಿಗೆ ಹೆಚ್ಚುವರಿ ಹಣ ನೀಡಲು ಮುಂದಾದ KMF

BIG NEWS: ನಾಳೆಯಿಂದಲೇ ರೈತರಿಗೆ ಹೆಚ್ಚುವರಿ ಹಣ ನೀಡಲು ಮುಂದಾದ KMF

ಕಲಬುರ್ಗಿ: ಲೀಟರ್ ಎಮ್ಮೆ ಹಾಲಿಗೆ ಹೆಚ್ಚುವರಿಯಾಗಿ 9.25ರೂಪಾಯಿ ಹಣ ನೀಡಲು ನಿರ್ಧರಿಸಲಾಗಿದ್ದು, ನಾಳೆಯಿಂದಲೇ ಜಾರಿಗೆ ಬರಲಿದೆ ಎಂದು ಕಲಬುರ್ಗಿಯಲ್ಲಿ ಹಾಲು ಒಕ್ಕೂಟದ ಅಧ್ಯಕ್ಷ ಆರ್.ಕೆ. ಪಾಟೀಲ್ ತಿಳಿಸಿದ್ದಾರೆ.

ಕಲಬುರ್ಗಿಯಲ್ಲಿ ಮಾತನಾಡಿದ ಆರ್.ಕೆ. ಪಾಟೀಲ್, ನಾಳೆಯಿಂದಲೇ ರೈತರಿಗೆ ಹೆಚ್ಚುವರಿ ಹಣ ನೀಡಲು ಕೆ.ಎಂ.ಎಫ್ ನಿರ್ಧರಿಸಿದೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಲಬುರ್ಗಿ, ಬೀದರ್, ಯಾದಗಿರಿ ಜಿಲ್ಲೆಗಳ ರೈತರಿಗೆ ಮಾತ್ರ ಇದು ಅನ್ವಯವಾಗಲಿದ್ದು, ಈ ಭಾಗದ ರೈತರಿಗೆ ಲೀಟರ್ ಎಮ್ಮೆ ಹಾಲಿಗೆ 9.25 ರೂ. ನೀಡಲಾಗುತ್ತದೆ. ಈ ಮೊದಲು ಲೀಟರ್ ಎಮ್ಮೆ ಹಾಲಿಗೆ 36.80 ರೂ. ನೀಡಲಾಗುತ್ತಿತು. ಈಗ ಲೀಟರ್ ಹಾಲಿಗೆ 46 ರೂಪಾಯಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

For Latest News Updates, Join Our Whatsapp Community🚩
RELATED ARTICLES

Most Popular