HomeIndiaಅರ್ಚಕನಿಂದ ಆಘಾತಕಾರಿ ಕೃತ್ಯ: ಪ್ರೇಯಸಿ ಕೊಂದು ಮ್ಯಾನ್ ಹೋಲ್ ಗೆ ಶವ ಎಸೆದ

ಅರ್ಚಕನಿಂದ ಆಘಾತಕಾರಿ ಕೃತ್ಯ: ಪ್ರೇಯಸಿ ಕೊಂದು ಮ್ಯಾನ್ ಹೋಲ್ ಗೆ ಶವ ಎಸೆದ

ಹೈದರಾಬಾದ್: ಶಂಶಾಬಾದ್‌ ನಲ್ಲಿ ಬಂಗಾರು ಮೈಸಮ್ಮ ದೇವಸ್ಥಾನದ ಅರ್ಚಕನೊಬ್ಬ ತನ್ನ ಗೆಳತಿಯನ್ನು ಕೊಲೆ ಮಾಡಿ ಶವವನ್ನು ಸರೂರ್‌ ನಗರದ ಮ್ಯಾನ್‌ ಹೋಲ್‌ಗೆ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ.

ಅರ್ಚಕ ವೆಂಕಟಸಾಯಿ ಸೂರ್ಯ ಕೃಷ್ಣ ಎಂದು ಗುರುತಿಸಲಾದ ಆರೋಪಿಯು ಪೊಲೀಸರ ದಾರಿ ತಪ್ಪಿಸಲು ತನ್ನ ಗೆಳತಿ ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿಸಿಟಿವಿ ಕ್ಯಾಮೆರಾ ಸಾಕ್ಷ್ಯದ ಆಧಾರದ ಮೇಲೆ ಪೊಲೀಸರು ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿರುವ ವೆಂಕಟ ಸಾಯಿ ಸೂರ್ಯಕೃಷ್ಣ ಕುರುಗಂಟಿ ಅಪ್ಸರ ಅವರನ್ನು ಕೊಲೆ ಮಾಡಿದ್ದಾರೆ ಎಂದು ತೀರ್ಮಾನಿಸಿದ್ದಾರೆ.

ಅಪ್ಸರಾ ಮದುವೆಯಾಗುವಂತೆ ಒತ್ತಡ ಹೇರಿದ್ದಕ್ಕೆ ಸೂರ್ಯ ಕೃಷ್ಣ ಕೊಲೆ ಮಾಡಿರಬಹುದು ಎಂದು ಪೋಷಕರು ಹೇಳಿದ್ದಾರೆ.

ಸೂರ್ಯಕೃಷ್ಣ ಅವರ ತಂದೆ, ನನ್ನ ಮಗ ತುಂಬಾ ಒಳ್ಳೆಯ ಮನುಷ್ಯ. ಹುಡುಗಿ ಆಗಾಗ ದೇವಸ್ಥಾನಕ್ಕೆ ಬರುತ್ತಿದ್ದಳು. ಹುಡುಗಿಯ ಜೊತೆ ಹೆಚ್ಚು ಮಾತನಾಡಬೇಡಿ ಎಂದು ಸಾಯಿಕೃಷ್ಣಗೆ ಹಲವು ಬಾರಿ ಎಚ್ಚರಿಸಿದ್ದೆ. ಆಕೆಯ ಕಿರುಕುಳದಿಂದ ಸಾಯಿಕೃಷ್ಣ ಈ ಅಪರಾಧ ಮಾಡಿರಬಹುದು ಎಂದು ಹೇಳಿದ್ದಾರೆ.

ಅಪ್ಸರಾ ತಾಯಿ, ಮನೆಯಲ್ಲಿ ಕೊಯಮತ್ತೂರಿಗೆ ಹೋಗುವುದಾಗಿ ಹೇಳಿ ಶನಿವಾರ ಮನೆಯಿಂದ ಹೊರಗೆ ಹೋಗಿದ್ದಳು. ಭಾನುವಾರ ಬೆಳಗ್ಗೆ ಸಾಯಿಕೃಷ್ಣ ನಮ್ಮ ಮನೆಗೆ ಭೇಟಿ ನೀಡಿದ್ದರು. ಅಪ್ಸರಾ ಫೋನ್ ಎತ್ತುತ್ತಿಲ್ಲ ಏನಾಯಿತು ಅಂತ ಕೇಳಿದರು. ಸಾಯಿಕೃಷ್ಣ ನಮ್ಮ ಮನೆಗೆ ಹಲವು ಬಾರಿ ಬರುತ್ತಿದ್ದರು. ಸಾಯಿಕೃಷ್ಣ ನಮ್ಮ ಮಗಳನ್ನು ಕೊಂದಿದ್ದಾನೆ ಎಂದು ಹೇಳಿದ್ದಾರೆ.

ಈ ನಡುವೆ ಶುಕ್ರವಾರ ಮಧ್ಯಾಹ್ನ ಪೊಲೀಸರು ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹವನ್ನು ಮ್ಯಾನ್‌ಹೋಲ್‌ನಿಂದ ಹೊರತೆಗೆದು ತನಿಖೆ ಕೈಗೊಂಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular