HomeKarnatakaBIG NEWS: ದೋಸೆ ಫ್ರೀ ಅಂತ ಬೋರ್ಡ್ ಹಾಕಿ ಚಟ್ನಿಗೆ ಹಣ ಕೇಳುವ ಕಥೆ ಇವರದ್ದು;...

BIG NEWS: ದೋಸೆ ಫ್ರೀ ಅಂತ ಬೋರ್ಡ್ ಹಾಕಿ ಚಟ್ನಿಗೆ ಹಣ ಕೇಳುವ ಕಥೆ ಇವರದ್ದು; ಸರ್ಕಾರದ ವಿರುದ್ಧ ಮಾಜಿ ಸಿಎಂ ಟೀಕೆ

ಬೆಂಗಳೂರು: ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಷರತ್ತು ಹಾಕಿರುವ ವಿಚಾರವಾಗಿ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಸ್ವಚ್ಛ ಸರ್ಕಾರ ಕಾಂಗ್ರೆಸ್ ನಾಯಕರಿಂದ ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಚುನಾವಣೆಗೂ ಮುನ್ನ ಕಾಂಗ್ರೆಸ್ ನವರು ಹೇಳಿದ್ದೇನು ? ಈಗ ಮಾಡುತ್ತಿರುವುದೇನು ? ಗ್ಯಾರಂಟಿ ಯೋಜನೆಗಳಿಗೆ ಈಗ ಷರತ್ತು ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಭಾರಿ ಚರ್ಚೆಯಾಗುತ್ತಿದೆ. ದೋಸೆ ಫ್ರೀ ಅಂತ ಬೋರ್ಡ್ ಹಾಕಿಕೊಂಡು ಚಟ್ನಿಗೆ ಹಣ ಕೇಳುವ ಕಥೆ ಇವರದ್ದು ಎಂದು ಟೀಕಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜನ ನಂಬಿಕೆ ಇಟ್ಟು ಮತ ಹಾಕಿದ್ದಾರೆ. ಆದರೆ ಇವರು ಮೂರು ನಾಮ ಎಳಿತಿದ್ದಾರೆ ಅಷ್ಟೇ. ನಾನು ಜನರ ಮುಂದೆ ಸುಮ್ಮನೇ ಹೋಗಲ್ಲ. ಜನರಿಗೆ ಏನು ಮೋಸ ಮಾಡಿದ್ದಾರೆ ಎಂಬುದನ್ನು ಇಟ್ಟುಕೊಂಡು ಹೋಗುತ್ತೇನೆ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular