ಗೃಹಿಣಿಯರಿಗೆ ಮತ್ತು ಹೋಟೆಲ್ ಉದ್ಯಮದವರಿಗೆ ಸಿಹಿ ಸುದ್ದಿಯಿದು. ಮದರ್ ಡೈರಿ ತನ್ನ ಅಡುಗೆ ಎಣ್ಣೆ ‘ಧಾರಾ’ದ ಗರಿಷ್ಠ ಚಿಲ್ಲರೆ ಬೆಲೆಯನ್ನು (ಎಂಆರ್‌ಪಿ) ಲೀಟರ್‌ಗೆ 10 ರೂ.ಗಳಷ್ಟು ಕಡಿತಗೊಳಿಸಿದೆ. ಬೆಲೆ ಕಡಿತದ ಬಳಿಕ ಹೊಸ ದರಗಳೊಂದಿಗೆ ಮುಂದಿನ ವಾರ ಸ್ಟಾಕ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿರುತ್ತವೆ. ಜಾಗತಿಕ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಬೆಲೆ ಇಳಿಕೆಗೆ ಅನುಗುಣವಾಗಿ ಎಂಆರ್‌ಪಿ ಇಳಿಕೆಯಾಗಿದೆ ಎಂದು ಕಂಪನಿ ತಿಳಿಸಿದೆ.
“ಅಂತರರಾಷ್ಟ್ರೀಯವಾಗಿ ಖಾದ್ಯ ತೈಲ ಬೆಲೆಯಲ್ಲಿ ನಿರಂತರ ಇಳಿಕೆ ಮತ್ತು ಸಾಸಿವೆಯಂತಹ ದೇಶೀಯ ಬೆಳೆಗಳ ಉತ್ತಮ ಲಭ್ಯತೆಯ ಕಾರಣದಿಂದಾಗಿ ಧಾರಾ ಖಾದ್ಯ ತೈಲಗಳ ಎಲ್ಲಾ ರೂಪಾಂತರಗಳ ಗರಿಷ್ಠ ಚಿಲ್ಲರೆ ಬೆಲೆಯನ್ನು (MRP) ಲೀಟರ್‌ಗೆ 10 ರೂಪಾಯಿಗಳಷ್ಟು ಕಡಿಮೆ ಮಾಡಲಾಗುತ್ತಿದೆ” ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ಪರಿಷ್ಕೃತ ಎಂಆರ್‌ಪಿ ಷೇರುಗಳು ಒಂದು ವಾರದೊಳಗೆ ಮಾರುಕಟ್ಟೆಗೆ ಬರಲಿವೆ ಎಂದು ವಕ್ತಾರರು ತಿಳಿಸಿದ್ದಾರೆ.
ಬೆಲೆ ಕಡಿತ ಬಳಿಕ ‘ಧಾರಾ’ ಬೆಲೆ ಈ ರೀತಿಯಾಗಿದೆ
ಸೋಯಾಬೀನ್ ಎಣ್ಣೆ- ಲೀಟರ್‌ಗೆ 140 ರೂ.
ರಿಫೈನ್ಡ್ ರೈಸ್‌ಬ್ರಾನ್ ಆಯಿಲ್- ಲೀಟರ್‌ಗೆ 160 ರೂ.
ರಿಫೈನ್ಡ್ ವೆಜಿಟಬಲ್ ಆಯಿಲ್- ಲೀಟರ್‌ಗೆ 200 ರೂ.
ಕಚಿ ಘನಿ ಸಾಸಿವೆ ಎಣ್ಣೆ – ಲೀಟರ್ 160 ರೂ.
ಧಾರಾ ಸಾಸಿವೆ ಎಣ್ಣೆ – ಲೀಟರ್ ಗೆ 158 ರೂ.
ರಿಫೈನ್ಡ್ ಸೂರ್ಯಕಾಂತಿ ಎಣ್ಣೆ- ಲೀಟರ್‌ಗೆ 150 ರೂ.
ಕಡಲೆ ಎಣ್ಣೆ- ಲೀಟರ್‌ಗೆ 230 ರೂ.