HomeKarnatakaBIG NEWS: ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೊಂದು ತಲೆ ನೋವು ಆರಂಭ; ಲೋನ್ ಕಟ್ಟಲ್ಲ ಎಂದು ಪಟ್ಟು...

BIG NEWS: ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೊಂದು ತಲೆ ನೋವು ಆರಂಭ; ಲೋನ್ ಕಟ್ಟಲ್ಲ ಎಂದು ಪಟ್ಟು ಹಿಡಿದ ಮಹಿಳೆ

ಕೋಲಾರ: ರಾಜ್ಯ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ್ದ 5 ಗ್ಯಾರಂಟಿ ಭರವಸೆಗಳನ್ನು ಜಾರಿಗೆ ತಂದಿದೆ, ಆದರೆ ಹಲವು ಷರತ್ತುಗಳನ್ನು ಹಾಕಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ ಸರ್ಕಾರಕ್ಕೆ ಮತ್ತೊಂದು ತಲೆನೋವು ಶುರುವಾಗಿದೆ.

ಕೋಲಾರದಲ್ಲಿ ನಾವು ಸಿದ್ದರಾಮಯ್ಯಗೆ ವೋಟ್ ಹಾಕಿದ್ದೇವೆ ಹಾಗಾಗಿ ಲೋನ್ ಕಟ್ಟುವುದಿಲ್ಲ ಎಂದು ಜನರು ಹಠ ಹಿಡಿದಿದ್ದಾರೆ. ಮಹಿಳೆಯೊಬ್ಬಳು ಈ ಬಗ್ಗೆ ಖಡಕ್ ಆಗಿ ಹೇಳಿಕೆ ನೀಡಿದ್ದು, ನಾವು ಸಿದ್ದರಾಮಯ್ಯನವರಿಗೆ ವೋಟ್ ಹಾಕಿದ್ದೇವೆ ಹಾಗಾಗಿ ಸಾಲ ಮನ್ನಾ ಮಾಡಬೇಕು. ಯಾವ ಕಾರಣಕ್ಕೂ ಲೋನ್ ಕಟ್ಟಲ್ಲ ಎಂದು ಪಟ್ಟು ಹಿಡಿದಿದ್ದಾಳೆ.

ಮಹಿಳೆ ಮನವೊಲಿಕೆಗೆ ಅಧಿಕಾರಿಗಳು ಪ್ರಯತ್ನಿಸಿಯೂ ಯಾವುದೇ ಪ್ರಯೋಜನವಾಗಿಲ್ಲ, ಗ್ಯಾರಂಟಿ ಯೋಜನೆಗಳ ಬಳಿಕ ಈಗ ಸಾಲಮನ್ನಾ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಲಿದೆಯೇ ಕಾದುನೋಡಬೇಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular