HomeKarnatakaBig News: ಚಿಕ್ಕಬಳ್ಳಾಪುರದಲ್ಲಿ 'ಮುಸ್ಲಿಂ' ಯುವಕರ ನೈತಿಕ ಪೊಲೀಸ್ ಗಿರಿ; ಯುವಕ, ಯುವತಿ ಮೇಲೆ ಹಲ್ಲೆಗೆ...

Big News: ಚಿಕ್ಕಬಳ್ಳಾಪುರದಲ್ಲಿ ‘ಮುಸ್ಲಿಂ’ ಯುವಕರ ನೈತಿಕ ಪೊಲೀಸ್ ಗಿರಿ; ಯುವಕ, ಯುವತಿ ಮೇಲೆ ಹಲ್ಲೆಗೆ ಯತ್ನ

ಚಿಕ್ಕಬಳ್ಳಾಪುರ : ನೈತಿಕ ಪೊಲೀಸ್ ಗಿರಿ ನಡೆಸಿ ಯುವಕ ಹಾಗೂ ಯುವತಿ ಮೇಲೆ ಹಲ್ಲೆ ನಡೆಸಿದ ಘಟನೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯ ಚಿಂತಾಮಣಿಯ ಮೆಹಬೂಬ್ ನಗರದಲ್ಲಿ ನಡೆದಿದೆ.

ಮುಸ್ಲಿಂ ಯುವಕರು ನೈತಿಕ ಪೊಲೀಸ್ ಗಿರಿ ನಡೆಸಿದ್ದು, ಮುಸ್ಲಿಂ ಯುವತಿ (Muslim woman) ಜತೆ ಹಿಂದೂ ಯುವಕ ಇದ್ದಿದ್ದಕ್ಕೆ ಆತನ ಮೇಲೆ ಹಲ್ಲೆಗೆ ಯತ್ನ ನಡೆಸಲಾಗಿದೆ. ಮುಸ್ಲಿಂ ಯುವತಿ ಮೇಲೆಯೂ ಕೂಡ ಹಲ್ಲೆಗೆ ಯತ್ನ ನಡೆಸಲಾಗಿದೆ.

ಚೇಳೂರು ಮೂಲದ ಮುಸ್ಲಿಂ ಯುವತಿ, ಚಿಂತಾಮಣಿ ಮೂಲದ ಹಿಂದೂ ಯುವಕ ಜೊತೆಗೆ ಇದ್ದಿದ್ದನ್ನು ಕಂಡ ಮುಸ್ಲಿಂ ಯುವಕರು ನಿಂದಿsi ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನೈತಿಕ ಪೊಲೀಸ್ ಗಿರಿ ನಡೆಸುವವರ ವಿರುದ್ಧ ಕಠಿಣ ಕ್ರಮ
(Strict action) ಕೈಗೊಳ್ಳವಂತೆ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದರು. ಈ ಬೆನ್ನಲ್ಲೇ ರಾಜ್ಯದ ಹಲವು ಕಡೆ ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆಗಳು ವರದಿಯಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular