
ವರ್ಗಾವಣೆ ಕಾಯ್ದೆ ಮತ್ತು ಅಧಿನಿಯಮಗಳನ್ವಯ 2022-23 ನೇ ಸಾಲಿನ ಸರ್ಕಾರಿ ಪಾಥಮಿಕ ಶಾಲಾ ಶಿಕ್ಷಕರ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಯನ್ನು ಗಣಕೀಕೃತ ಕೌನ್ಸೆಲಿಂಗ್ ಮೂಲಕ ಜರುಗಿಸುವ ಕುರಿತು ಉಲ್ಲೇಖ(01) ದ ವರ್ಗಾವಣಾ ಅಧಿಸೂಚನೆ ಹಾಗೂ ಉಲ್ಲೇಖ(2) ರಲ್ಲಿ ನೀಡಲಾದ ಪರಿಷ್ಕೃತ ವೇಳಾಪಟ್ಟಿ ಹಾಗೂ ವರ್ಗಾವಣೆ ಮಾರ್ಗಸೂಚಿಯಲ್ಲಿನ ಅಂಶಗಳನ್ನು ಸ್ಪಷ್ಟವಾಗಿ ಅರ್ಥೈಸಿಕೊಂಡು ಪ್ರಸ್ತಾಪಿತ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ. ಯಾವುದೇ ಲೋಪದೋಷಗಳಾಗದಂತೆ ನಿಗದಿತ ವೇಳಾಪಟ್ಟಿಯನ್ವಯ ಕಾಲಕಾಲಕ್ಕೆ ಅಗತ್ಯ ಕ್ರಮವಹಿಸುವುದು ಹಾಗೂ ಈ ಕಚೇರಿಗೆ ವರದಿ ಸಲ್ಲಿಸುವುದು ತಪ್ಪಿದಲ್ಲಿ ಮುಂದಿನ ಆಗುಹೋಗುಗಳಿಗೆ ತಾವೇ ಜವಾಬ್ದಾರರಾಗುವಿರಿ ಎಂದು ಈ ಮೂಲಕ ತಿಳಿಸಲಾಗಿದೆ.


