alex Certify ಮೊನಾಲಿಸಾಗೂ ಇಷ್ಟ ಇಂಡಿಯನ್ ವೆರೈಟಿ-ವೆರೈಟಿ ಫುಡ್: ಅಸಾಧ್ಯವಾಗಿದ್ದನ್ನ ಸಾಧ್ಯ ಮಾಡಿ ತೋರಿಸಿದ AI ತಂತ್ರಜ್ಞಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊನಾಲಿಸಾಗೂ ಇಷ್ಟ ಇಂಡಿಯನ್ ವೆರೈಟಿ-ವೆರೈಟಿ ಫುಡ್: ಅಸಾಧ್ಯವಾಗಿದ್ದನ್ನ ಸಾಧ್ಯ ಮಾಡಿ ತೋರಿಸಿದ AI ತಂತ್ರಜ್ಞಾನ

ಮೊನಾಲಿಸಾ ಯಾರಿಗೆ ಗೊತ್ತಿಲ್ಲ ಹೇಳಿ, ಸದಾ ಹಸನ್ಮುಖಿಯಾಗಿರೋ ಸುಂದರಿ. ಈ ಪೆಂಟಿಂಗ್ ಬಿಡಿಸಿ ಅದ್ಯಾವ ಕಾಲವಾಗಿದೆಯೋ ಏನೋ, ಆದರೂ ಇಂದಿಗೂ ಈ ಚಿತ್ರಪಟ ಫೇಮಸ್ ಆಗಿದೆ. ನೀವು ಯಾವತ್ತಾದ್ರೂ ಇದೇ ಮೊನಾಲಿಸಾ ಇಂಡಿಯನ್ ಫುಡ್ ತಿನ್ನೊದನ್ನ ನೋಡಿದ್ದೀರಾ? ಅದೇಗೆ ಸಾಧ್ಯ ಅಂತಿರಾ? AI ಅನ್ನೊ ಸಾಪ್ಟವೇರ್ ಅದು ಸಾಧ್ಯ ಅಂತ ಹೇಗೆ ತೋರಿಸಿದೆ.

AI ಅಂದರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಈ ತಂತ್ರಜ್ಞಾನ ಬಂದಿದ್ದೇ ಬಂದಿದ್ದು ಇಡೀ ಜಗತ್ತಿನ ಚಿತ್ರಣವೇ ಬದಲಾಗಿ ಹೋಗಿದೆ. ಇದೊಂದು ಅತ್ಯದ್ಭುತ ತಂತ್ರಜ್ಞಾನವಾಗಿದ್ದು, ಕೆಲವರ ಪ್ರಕಾರ ಇದೇ ತಂತ್ರಜ್ಞಾನ ಮುಂದಿನ ದಿನಗಳಲ್ಲಿ ಶಾಪವೂ ಆಗಬಹುದು. ಸದ್ಯಕ್ಕಂತೂ ಈ ಇಂಟೆಲಿಜೆನ್ಸ್ ಹೊಸ ಹೊಸ ಅಷ್ಟೆ ಆಸಕ್ತಿಕದಾಯಕ ವಿಚಾರವನ್ನ ಜನರ ಮುಂದಿಟ್ಟು ಹೊಸ ಹೊಸ ಅನುಭವನ್ನ ಕೊಡ್ತಿದೆ.

ಸದ್ಯಕ್ಕೆ ಭಾರತದ ಪ್ರಸಿದ್ಧ ಬಾಣಸಿಗ ವಿಕಾಸ್ ಖನ್ನಾ ಇದೇ ತಂತ್ರಜ್ಞಾನ ಬಳಸಿಕೊಂಡು ಹೊಸ ಪ್ರಯೋಗವೊಂದನ್ನ ಮಾಡಿದ್ದಾರೆ. ಈ ಚಿತ್ರದಲ್ಲಿ ಪ್ರಸಿದ್ಧ ಮೊನಾಲಿಸಾ ಇರುವುದನ್ನ ನೋಡಬಹುದು. ಇಷ್ಟು ದಿನ ಮೊನಾಲಿಸಾ ಚಿತ್ರ ಫೋಟೋದಲ್ಲಿ ಪೋಸ್ ಕೊಡ್ತಿರೋದನ್ನ ಮಾತ್ರ ನಾವು ನೋಡಿದ್ದೇವೆ. ಆದರೆ ಈ ಚಿತ್ರದಲ್ಲಿ ಅದೇ ಮೊನಾಲಿಸಾ ಭಾರತೀಯ ಶೈಲಿಯ ತಿಂಡಿ ತಿನ್ನುತ್ತಿರುವುದನ್ನ ನೋಡಬಹುದಾಗಿದೆ.

ಈ ಪೋಸ್ಟ್‌ನ ವಿಕಾಸ್ ಖನ್ನಾ ತಮ್ಮ ಟ್ವಿಟ್ಟರ್ ಅಕೌಂಟ್‌ನಲ್ಲಿ ಶೇರ್ ಮಾಡ್ಕೊಂಡಿದ್ದಾರೆ. ಇಲ್ಲಿ ಮೊನಾಲಿಸಾ ಟೇಬಲ್ ತುಂಬಾ ದೇಸಿ ವೆರೈಟಿ-ವೆರೈಟಿ ಖಾದ್ಯಗಳನ್ನ ಇಟ್ಟುಕೊಂಡಿದ್ದಾಳೆ. ಅದನ್ನೇ ಆಕೆ ತಿಂದು ಎಂಜಾಯ್ ಮಾಡ್ತಿದ್ದಾಳೆ. ಇದೇ ಪೋಸ್ಟ್‌ ನ ಶೀರ್ಷಿಕೆಯಲ್ಲಿ ‘ಓಕೆ ಇದನ್ನ ನಾನು AI ಸಹಾಯದಿಂದ ಮಾಡಿದ್ದೇನೆʼ ಎಂದಿದ್ದಾರೆ. ಟ್ವಿಟರ್‌ನ ಈ ಪೋಸ್ಟ್ ವೈರಲ್ ಆಗಿದ್ದು, ನೆಟ್ಟಿಗರು ಈ ಚಿತ್ರವನ್ನ ನೋಡಿ ಅದ್ಭುತ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...