HomeEntertainmentBIG NEWS: ಬಾಲಿವುಡ್ ನೆಚ್ಚಿನ 'ಅಮ್ಮ' ಹಿರಿಯ ನಟಿ ಸುಲೋಚನ ಇನ್ನಿಲ್ಲ

BIG NEWS: ಬಾಲಿವುಡ್ ನೆಚ್ಚಿನ ‘ಅಮ್ಮ’ ಹಿರಿಯ ನಟಿ ಸುಲೋಚನ ಇನ್ನಿಲ್ಲ

ಬಾಲಿವುಡ್ ನ ಹಿರಿಯ ನಟಿ ಸುಲೋಚನ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಅವರು ಹೆಚ್ಚು ತಾಯಿ ಪಾತ್ರಗಳಿಂದ ಬಾಲಿವುಡ್ ನ ನೆಚ್ಚಿನ ‘ಅಮ್ಮ’ ಎಂದೇ ಖ್ಯಾತರಾಗಿದ್ದರು.

ಸುಲೋಚನಾ ಅವರು 200 ಕ್ಕೂ ಹೆಚ್ಚು ಹಿಂದಿ ಚಲನಚಿತ್ರಗಳು ಮತ್ತು ಮರಾಠಿ ಚಿತ್ರಗಳಲ್ಲಿ ನಟಿಸಿದ್ದಾರೆ. 1940 ರ ದಶಕದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಅವರಿಗೆ ಕೇಂದ್ರ ಸರ್ಕಾರ ʼಪದ್ಮಶ್ರೀʼ ಗೌರವ ನೀಡಿ ಪುರಸ್ಕರಿಸಿತ್ತು.

ಸುಲೋಚನಾ ಅವರ ಮಗಳು ಕಾಂಚನ್ ಘಾನೇಕರ್ ಅವರು ನಿಧನದ ಸುದ್ದಿಯನ್ನ ದೃಢಪಡಿಸಿದ್ದಾರೆ. “ಅವರಿಗೆ ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಮತ್ತು ಉಸಿರಾಟದ ತೊಂದರೆ ಇತ್ತು. ಅವರು ಇಂದು ಸಂಜೆ 6 ಗಂಟೆಗೆ ನಿಧನರಾದರು. ಅವರ ಅಂತಿಮ ದರ್ಶನವನ್ನು ಅವರ ಪ್ರಭಾದೇವಿ ನಿವಾಸದಲ್ಲಿ ನಡೆಸಲಾಗುವುದು ಮತ್ತು ಸೋಮವಾರ ಸಂಜೆ 5:30 ಕ್ಕೆ ಶಿವಾಜಿ ಪಾರ್ಕ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ” ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅವರನ್ನು ಮೇ 8 ರಂದು ದಾದರ್‌ನ ಶುಶ್ರೂಷಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಟ ರಿತೇಶ್ ದೇಶ್‌ಮುಖ್ ಅವರು ಟ್ವಿಟರ್‌ನಲ್ಲಿ ಮೃತ ನಟಿ ಸುಲೋಚನ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. “ಸುಲೋಚನಾ ದೀದಿ ಸಾವಿನ ಸುದ್ದಿ ತುಂಬಾ ದುಃಖ ತಂದಿದೆ. ಮರಾಠಿ ಮತ್ತು ಹಿಂದಿ ಚಿತ್ರರಂಗದಲ್ಲಿ ಪ್ರೇಕ್ಷಕರ ಹೃದಯವನ್ನು ಆಳಿದ ಈ ಮಹಾನ್ ನಟಿಗೆ ಹೃತ್ಪೂರ್ವಕ ನಮನಗಳು, ”ಎಂದು ಟ್ವೀಟ್ ಮಾಡಿದ್ದಾರೆ.

ಮನೋಜ್ ಕುಮಾರ್, ದೇವ್ ಆನಂದ್ ಮತ್ತು ಮೆಹಮೂದ್ , ಅಮಿತಾಬ್ ಬಚ್ಚನ್ ಅವರಂತಹ ಬಹುತೇಕ ಎಲ್ಲಾ ಪ್ರಮುಖ ನಟರ ತಾಯಿಯಾಗಿ ತೆರೆಮೇಲೆ ಸುಲೋಚನ ಹೆಚ್ಚಾಗಿ ಕಾಣಿಸಿಕೊಂಡಿದ್ದರು.

“ಹೀರಾ”, “ರೇಷ್ಮಾ ಔರ್ ಶೇರಾ”, “ಜಾನಿ ದುಷ್ಮನ್”, “ಜಬ್ ಪ್ಯಾರ್ ಕಿಸೀ ಹೋತಾ ಹೈ”, “ಜಾನಿ ಮೇರಾ ನಾಮ್”, “ಕಟಿ ಪತಂಗ್”, ಮೇರೆ ಜೀವನ ಸಾಥಿ”, “ಪ್ರೇಮ್ ನಗರ್” , “ಭೋಲಾ ಭಲಾ”. ಮುಂತಾದ ಹಿಂದಿ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular