HomeKarnatakaBIG NEWS : ರಾಜ್ಯ ಸರ್ಕಾರದಿಂದ `ಗೋಹತ್ಯೆ ನಿಷೇಧ ಕಾಯ್ದೆ’ ಬಗ್ಗೆ ಯೋಗ್ಯ ನಿರ್ಣಯ; ಸಚಿವ...

BIG NEWS : ರಾಜ್ಯ ಸರ್ಕಾರದಿಂದ `ಗೋಹತ್ಯೆ ನಿಷೇಧ ಕಾಯ್ದೆ’ ಬಗ್ಗೆ ಯೋಗ್ಯ ನಿರ್ಣಯ; ಸಚಿವ ಸತೀಶ್ ಜಾರಕಿಹೊಳಿ

VIDEO - 'ಹಿಂದೂ' ಪದದ ಬಗ್ಗೆ ಹೇಳಿಕೆ: ಸತೀಶ್ ಜಾರಕಿಹೊಳಿ ಸ್ಪಷ್ಟನೆ - Varthabharati

ಬೆಳಗಾವಿ : ಗೋಹತ್ಯೆ ನಿಷೇಧ (Gohatye Ban) ಕಾಯ್ದೆ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಯೋಗ್ಯ ನಿರ್ಣಯ ಮಾಡುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರಿಗೆ ಬರೀ ಕೋಮುದ್ವೇಷ ಹರಡಿಸೋದು, ಗಲಾಟೆ ಮಾಡಿಸುವುದು ಇಷ್ಟೇ ಗೊತ್ತಿರುವುದು. ಅವರು ಇದನ್ನೇ ಮಾಡಿದ್ದಾರೆ ಅವರಿಗೆ ಅಭಿವೃದ್ಧಿ ಅಂತೂ ಗೊತ್ತೇ ಇಲ್ಲ ಬಿಜೆಪಿಯವರು ಮುಂದಿನ 5ವರ್ಷ ಹೋರಾಟ ಮಾಡುವುದೇ ಕೆಲಸವಾಗಲಿದೆ. ಇನ್ನು ಐದು ವರ್ಷ ಅವರಿಗೆ ಕೆಲಸ ಏನೂ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಗ್ಯಾರಂಟಿ ಕೊಟ್ಟಿದ್ದೇವೆ, ಬೇರೆ ವಿಚಾರ ಇಟ್ಟುಕೊಂಡು ಬರುತ್ತಾರೆ. ನಮ್ಮ ಗ್ಯಾರಂಟಿ ಯೋಜನೆ ಬೇರೆ ರಾಜ್ಯಗಳಿಗೂ ಮಾದರಿ ಆಗುತ್ತದೆ. ಕರ್ನಾಟಕ ಮಾಡಲ್ ಬಂದೇ ಬರುತ್ತೆ, ಕರ್ನಾಟಕ ಮಾಡಲ್ ಫೇಮಸ್ ಆಗಲಿದೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular