
ಈ ಕೃತ್ಯ ಎಸಗಿದ ವ್ಯಕ್ತಿಯನ್ನ ಮೊಹಮ್ಮದ್ ಫರ್ಹಾನ್ ಎಂದು ಗುರುತಿಸಲಾಗಿದೆ. ಹೆತ್ತ ಕರುಳ ದಾರುಣ ಸಾವು ಕಂಡ ಶಬ್ಬೊ ಬೇಗಂ ತನ್ನ ಪತಿಯ ವಿರುದ್ಧ ಸ್ಥಳೀಯ ಪೊಲೀಸ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ. ಪೊಲೀಸರು ಗಂಡ ಹೆಂಡತಿ ರಾಜಿ ಮಾಡಿಕೊಳ್ಳುವಂತೆ ಒತ್ತಡ ತರ್ತಿದ್ದಾರೆ ಎಂದು ಮಾಧ್ಯಮದ ಮುಂದೆ ಶಬೋ ಬೇಗಂ ಹೇಳಿದ್ದಾರೆ.
ಗರ್ಭಿಣಿಯಾಗಿದ್ದಾಗ ಪತಿ ತನಗೆ ಅನೇಕ ಬಾರಿ ಹೊಟ್ಟೆಗೆ ಹೊಡೆದಿದ್ದಾನೆ, ಚಿತ್ರಹಿಂಸೆ ಕೊಟ್ಟಿದ್ದಾನೆ. ಅಲ್ಲದೇ ಈಗಾಗಲೇ 2 ಹೆಣ್ಣುಮಕ್ಕಳಿದ್ದು, ಈ ಬಾರಿಯೂ ಹೆಣ್ಣು ಮಗುವಿಗೆ ಜನ್ಮ ನೀಡಿದರೆ ತಲಾಖ್ ನೀಡುವುದಾಗಿ ಬೆದರಿಸಿದ್ದಾನೆ ಎಂದು ಶಬ್ಬೊ ಬೇಗಂ ಆರೋಪಿಸಿದ್ದಾರೆ. ಘಟನೆ ಕುರಿತು ಮಾಧ್ಯಮದ ಮುಂದೆ ಸ್ಪಷ್ಟನೆ ನೀಡಿರುವ ಸರ್ಕಲ್ ಆಫೀಸರ್ ಸುನೀಲ್ ದತ್, ಈಗಾಗಲೇ ಸಂತ್ರಸ್ತೆ ಎಫ್ಐಆರ್ ನೀಡಿರುವ ದೂರನ್ನ ದಾಖಲಿಸಿ ಅಗತ್ಯ ಕ್ರಮವನ್ನು ಕೈಗೊಂಡಿರುವುದಾಗಿ ಹೇಳಿದ್ದಾರೆ.

