HomeBusinessಚಿಕನ್, ಮೊಟ್ಟೆ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಗಣನೀಯ ಏರಿಕೆಯಾದ ದರ

ಚಿಕನ್, ಮೊಟ್ಟೆ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಗಣನೀಯ ಏರಿಕೆಯಾದ ದರ

ಬೆಂಗಳೂರು: ಬಿಸಿಲ ಬೇಗೆ ತೀವ್ರ ಏರಿಕೆಯ ಪರಿಣಾಮ ಕೋಳಿ ಮತ್ತು ಮೊಟ್ಟೆ ದರ ಗಣನೀಯ ಏರಿಕೆ ಕಂಡಿದೆ. ಬಿಸಿಲ ಬೇಗೆ ಕಾರಣ ಕೋಳಿ ಮತ್ತು ಮೊಟ್ಟೆ ಉತ್ಪಾದನೆಯ ಮೇಲೆ ಪರಿಣಾಮ ಬೀರಿರುವುದರಿಂದ ಕೋಳಿ ಮತ್ತು ಮೊಟ್ಟೆಯ ದರ ತೀವ್ರ ಏರಿಕೆ ಕಂಡಿದೆ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೇಸಿಗೆಯ ಬಿಸಿಲಿಗೆ ಕೋಳಿಗಳು ಶಾಖದ ಒತ್ತಡ ಅನುಭವಿಸಿದ್ದು, ಇದರ ಪರಿಣಾಮ ಮೊಟ್ಟೆ ಉತ್ಪಾದನೆ ಸಾಮರ್ಥ್ಯದ ಮೇಲೆ ಉಂಟಾಗಿದೆ. ಬೇಸಿಗೆಯಲ್ಲಿ ಕೋಳಿಗಳು ಆಹಾರ ಸೇವನೆ ಕಡಿಮೆ ಮಾಡಿ ಹೆಚ್ಚಿನ ಪ್ರಮಾಣದ ನೀರು ಕುಡಿಯುತ್ತವೆ. ಇವುಗಳಿಗೆ ಬೆವರುವ ಸಾಮರ್ಥ್ಯ ಇರುವುದಿಲ್ಲ. ಗರಿಗಳು ಇರುವ ಕಾರಣ ದೇಹದ ಶಾಖ ಕಡಿಮೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರಿಂದಾಗಿ ಕಡಿಮೆ ತೂಕ, ಕಳಪೆ ಚಿಪ್ಪಿನ, ಕಡಿಮೆ ಗುಣಮಟ್ಟದ ಮೊಟ್ಟೆಗಳು ಉತ್ಪತ್ತನೆಯಾಗುತ್ತಿವೆ. ಉತ್ಪಾದನಾ ಸಾಮರ್ಥ್ಯ ಕೂಡ ಕಡಿಮೆಯಾಗಿದೆ. ಉತ್ಪಾದನೆಯಲ್ಲಿ ಇಳಿಕೆಯಾದ ಪರಿಣಾಮ ಮೊಟ್ಟೆಗಳ ದರ ಏರಿಕೆ ಕಂಡಿದೆ. ರಾಜ್ಯದಲ್ಲಿ ಸಾಮಾನ್ಯ ದಿನಗಳಲ್ಲಿ ದಿನಕ್ಕೆ 1.8 ಕೋಟಿ ಅಧಿಕ ಮೊಟ್ಟೆ ಉತ್ಪಾದನೆಯಿದ್ದು, ಮೇ ತಿಂಗಳಲ್ಲಿ 1.6 ಕೋಟಿಗೆ ಇಳಿಕೆಯಾಗಿದೆ.

ಬೇಸಿಗೆ ಕಾರಣಕ್ಕೆ ಅನೇಕ ಕೋಳಿ ಸಾಕಾಣಿಕೆದಾರರು ಹೊಸ ಮರಿಗಳನ್ನು ಸಾಕಲು ಮುಂದಾಗಿಲ್ಲ. ಇದು ಕೂಡ ಕೋಳಿ ಮತ್ತು ಮೊಟ್ಟೆ ಉತ್ಪಾದನೆ ಕುಸಿತಕ್ಕೆ ಕಾರಣವಾಗಿದ್ದು, ಮಳೆಗಾಲದಲ್ಲಿ ಮೊಟ್ಟೆ ಉತ್ಪಾದನೆ ಹೆಚ್ಚಾಗಲಿದೆ.

ಮೊಟ್ಟೆ ಬೆಲೆ ಏರಿಕೆಯ ಜೊತೆಗೆ ಚಿಕನ್ ದರ ಕೂಡ ಏರಿಕೆ ಕಂಡಿದೆ. ಉತ್ಪಾದನೆ ಕಡಿಮೆ ಮತ್ತು ಆಹಾರದ ಬೆಲೆ ಹೆಚ್ಚಳ ಪರಿಣಾಮ ಚಿಕನ್ ಬೆಲೆ ಗಗನಕ್ಕೇರಿದ್ದು, ಮಾಂಸಪ್ರಿಯರಿಗೆ ಹೊರೆಯಾಗಿದೆ. ರೆಡಿ ಚಿಕನ್ ಕೆಜಿಗೆ 200 ರಿಂದ 250 ರೂ., ಸ್ಕಿನ್ ಲೆಸ್ ಚಿಕನ್ 230 ರಿಂದ 280 ರೂ., ನಾಟಿ ಕೋಳಿ ಚಿಕನ್ ಕೆಜಿಗೆ 500 ರಿಂದ 600 ರೂ.ವರೆಗೆ ಏರಿಕೆಯಾಗಿದೆ. ಮೊಟ್ಟೆ ಸಗಟು ದರ 5.50 ರೂಪಾಯಿ, ರಿಟೇಲ್ 5.65 ರಿಂದ 7 ರೂ.ವರೆಗೆ ಏರಿಕೆಯಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular