HomeCrimeಸೈಕಲ್ ಕಳ್ಳತನದ ಶಂಕೆ: 50 ವರ್ಷದ ವ್ಯಕ್ತಿಯನ್ನು ಥಳಿಸಿ ಹತ್ಯೆ

ಸೈಕಲ್ ಕಳ್ಳತನದ ಶಂಕೆ: 50 ವರ್ಷದ ವ್ಯಕ್ತಿಯನ್ನು ಥಳಿಸಿ ಹತ್ಯೆ

ಬೈಸಿಕಲ್ ಕಳ್ಳತನದ ಗುಮಾನಿ ಹಬ್ಬಿದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಜನರ ಗುಂಪೊಂದು 50 ವರ್ಷ ವ್ಯಕ್ತಿಯೊಬ್ಬರನ್ನು ಕೊಂದ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಜರುಗಿದೆ.

ಜಿಲ್ಲೆಯ ಸಾಹಾಗಂಜ್ ದುನ್ಲಾಪ್‌ನಲ್ಲಿ 55 ವರ್ಷ ವಯಸ್ಸಿನ ಗೋದಾ ದಾಸ್ ಹೆಸರಿನ ವ್ಯಕ್ತಿ ಈ ಘಟನೆಯಿಂದ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಾಸ್ ಸಾವಿನ ಸಂಬಂಧ ಮೋಗ್ರಾ ಎಂಬ ಊರಿನ ನಿವಾಸಿ ಬ್ರಿಜೇಶ್ ಸಿಂಗ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ದಿನಗೂಲಿ ಕೌರ್ಮಿಕರಾದ ದಾಸ್ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಬೈಸಿಕಲ್ ಕಳ್ಳತನದ ಗಾಳಿಮಾತಿನಿಂದ ಸಿಟ್ಟುಗೊಂಡಿದ್ದ ಜನಸಮೂಹವೊಂದು ದಾಸ್‌ರನ್ನು ಮರಕ್ಕೆ ಕಟ್ಟೆ ಹಲ್ಲೆ ಮಾಡಿ ಕೊಂದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular