ಭಾವನಿಂದ ಹಲ್ಲೆಗೊಳಗಾದ ವಿಷಯ ಹಂಚಿಕೊಂಡ ಡಾನ್ಸರ್‌ ಗೋರಿ ನಾಗೋರಿ

ರಾಜಸ್ಥಾನ ಮೂಲದ ನೃತ್ಯಗಾತಿ ಗೋರಿ ನಾಗೋರಿ ತಮ್ಮ ಹಾಗೂ ತಮ್ಮ ತಂಡದ ಮೇಲೆ ಸಹೋದರ ಸಂಬಂಧಿಯೊಬ್ಬ ದಾಳಿ ಮಾಡಿದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಅಜ್ಮೇರ್‌ನ ಕಿಶನ್‌ಘಡದಲ್ಲಿ ಈ ಘಟನೆ ನಡೆದಿದೆ ಎಂದಿರುವ ಗೋರಿ, ಈ ವೇಳೆ ತಮ್ಮ ಸಹೋದರಿಯ ಮದುವೆಯಲ್ಲಿ ಭಾಗಿಯಾಗಲು ಅಜ್ಮೇರ್‌ನಲ್ಲಿದ್ದರಂತೆ.

ವಿಡಿಯೋದಲ್ಲಿ ಪುರುಷರ ಗುಂಪೊಂದು ಮತ್ತೊಂದು ಗುಂಪಿನ ಮೇಲೆ ಕುರ್ಚಿಗಳನ್ನು ಎಸೆದು ದಾಳಿ ಮಾಡುತ್ತಿರುವುದನ್ನು ನೋಡಬಹುದು. ತನ್ನ ಹಿರಿಯ ಭಾವ ಜಾವೇದ್ ಹುಸೇನ್ ಮದುವೆಯಲ್ಲಿ ತನಗಾಗಿ ಸಕಲ ವ್ಯವಸ್ಥೆಯನ್ನು ಮಾಡಿರುವುದಾಗಿ ಹೇಳಿದ್ದ ಕಾರಣಕ್ಕೆ ತಾನು ಕಿಶನ್‌ಘಡಕ್ಕೆ ಆಗಮಿಸಿದ್ದು, ಈ ವೇಳೆ ಆತ ಹಾಗೂ ಆತನ ಸ್ನೇಹಿತರು ತಮ್ಮ ಮೇಲೆ ಹಲ್ಲೆ ಮಾಡಿರುವುದಾಗಿ ಗೋರಿ ತಿಳಿಸಿದ್ದಾರೆ.

ಮೊದಲಿಗೆ ದೂರು ಸ್ವೀಕರಿಸಲು ನಿರಾಕರಿಸಿದ ಪೊಲೀಸರು, ಇದೊಂದು ವೈಯಕ್ತಿಕ ಘಟನೆ ಎಂದಿದ್ದು, ಇದರ ಬೆನ್ನಿಗೇ ತಮ್ಮೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ ಎಂದು ಗೋರಿ ಹೇಳಿಕೊಂಡಿದ್ದಾರೆ.

ತಮಗೆ ರಕ್ಷಣೆ ನೀಡಲು ರಾಜಸ್ಥಾನ ಸರ್ಕಾರವನ್ನು ವಿಡಿಯೋದಲ್ಲಿ ಕೋರಿಕೊಂಡಿರುವ ಗೋರಿ, ತಮಗೆ ನ್ಯಾಯ ದೊರಕಿಸಿಕೊಡಲು ನೆರವಾಗುವಂತೆ ಕೇಳಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read