ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೊಸ ಆವಿಷ್ಕಾರಗಳು, ಸ್ಪೂರ್ತಿದಾಯಕ ವಿಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಾರೆ. ಇದೀಗ, ವಿಶೇಷವಾಗಿ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ಅತ್ಯಂತ ವಿಶಿಷ್ಟವಾದ ಟಿ-ಶರ್ಟ್ ಕುರಿತು ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಟೀ ಶರ್ಟ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವ್ಯಕ್ತಿಯೊಬ್ಬರು ಪ್ರದರ್ಶಿಸಿದ್ದಾರೆ.
ಇದು ನೊಬೆಲ್ ಪ್ರಶಸ್ತಿಯನ್ನು ಪಡೆಯದಿರಬಹುದು. ಆದರೆ, ಇದು ನನಗೆ ಆ ಆವಿಷ್ಕಾರಗಳಿಗಿಂತ ಹೆಚ್ಚಿನ ಸ್ಥಾನದಲ್ಲಿದೆ. ಏಕೆಂದರೆ ಇಬ್ಬರು ಚಿಕ್ಕ ಮಕ್ಕಳ ಅಜ್ಜನಾಗಿ, ಅವರ ಯೋಗಕ್ಷೇಮ ಮತ್ತು ಸುರಕ್ಷತೆಯು ನನ್ನ ಹೆಚ್ಚಿನ ಆದ್ಯತೆಯಾಗಿದೆ ಎಂದು ಮಹೀಂದ್ರಾ ಶೀರ್ಷಿಕೆಯಲ್ಲಿ ಬರೆದಿದ್ದಾರೆ.
ಈ ಪೋಸ್ಟ್ ಹಲವಾರು ವೀಕ್ಷಣೆಗಳನ್ನು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ. ಫ್ಲೋಟೀ ಎಂಬ ಫ್ರೆಂಚ್ ಕಂಪನಿಯು ವಿಶಿಷ್ಟವಾದ ಟೀ ಶರ್ಟ್ ಅನ್ನು ಅಭಿವೃದ್ಧಿಪಡಿಸಿದೆ. ಈ ಟೀ ಶರ್ಟ್ ಧರಿಸಿದ್ದರೆ, ಮಕ್ಕಳು ಒಂದು ವೇಳೆ ಆಕಸ್ಮಾತ್ ಆಗಿ ನೀರಿನಲ್ಲಿ ಬಿದ್ದರೆ ಇದು ಬಲೂನ್ ನಂತೆ ಊದಿ ಮೇಲೆ ತರುವಲ್ಲಿ ಸಹಕಾರಿಯಾಗಿದೆ. ಈ ವಿಶಿಷ್ಟವಾದ ಟೀ ಶರ್ಟ್ ಬೆಲೆ 149 ಯುರೋಗೆ (ಅಂದಾಜು ರೂ. 13,000).
ಸದ್ಯ, ಈ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಈ ವಿಶಿಷ್ಟ ಟೀ ಶರ್ಟ್‌ನಿಂದ ಸಾಕಷ್ಟು ಪ್ರಭಾವಿತರಾಗಿದ್ದಾರೆ. ಇದು ಪೋಷಕರಿಗೆ ಕೊಂಚ ನೆಮ್ಮದಿ ನೀಡಲಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
This may not get a Nobel prize but it ranks higher than those inventions for me. Because as the grandfather of two young kids, their wellbeing & safety is my highest priority. 👏🏽👏🏽👏🏽 (video credit: @Rainmaker1973 ) https://t.co/ZaSyVMqZG9
— anand mahindra (@anandmahindra) May 25, 2023
I believe the greatest inventions are not always tangible, but rather the acts that shape & safeguard the future of our world.
Our children/grandchildren, are the living embodiment of hope & promise, representing the continuation of our legacy & the torchbearers of progress.
— Amit Misra (@amit6060) May 25, 2023
Thanks for keeping us engaged with such great inventions @anandmahindra 👏👏👏👏
— Gangadharan.PS (@gankadharanps) May 25, 2023

