ಕ್ಯಾನ್ಸರ್ ಅನ್ನೋದು ಒಂದು ಹೋರಾಟ. ಇದು ರೋಗಿಗೆ ಮಾತ್ರವಲ್ಲ ಕುಟುಂಬದ ಮೇಲೂ ಪರಿಣಾಮ ಬೀರುತ್ತದೆ. ರೋಗಿಯ ಸ್ನೇಹಿತರು ಮತ್ತು ಹಿತೈಷಿಗಳಿಗೆ ಸಾಧ್ಯವಿರುವುದೇನೆಂದರೆ ಅವರ ಜೀವನವನ್ನು ಸಾಧ್ಯವಾದಷ್ಟು ಸುಲಭ ಮತ್ತು ಸಂತೋಷದಾಯಕವಾಗಿಸುವುದು. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಗೆಳತಿಗೆ ಸ್ನೇಹಿತರ ಗುಂಪು ಧೈರ್ಯ ತುಂಬಿದ್ದನ್ನು ತೋರಿಸುತ್ತದೆ.
ಕ್ಯಾನ್ಸರ್ ಇರುವುದು ಪತ್ತೆಯಾದ ನಂತರ ಬಾಲಕಿ ತನ್ನ ಕೂದಲನ್ನು ಕಳೆದುಕೊಳ್ಳಬೇಕಾಯ್ತು. ತಮ್ಮ ಸ್ನೇಹಿತೆ ದುಃಖಿತವಾಗಬಾರದು ಅನ್ನೋ ಕಾರಣಕ್ಕೆ ಆಕೆಯ ಬೆಂಬಲಕ್ಕೆ ನಿಂತ ಸ್ನೇಹಿತರು ಕೂಡ ತಮ್ಮ ತಲೆಬೋಳಿಸಿಕೊಂಡಿದ್ದಾರೆ. ಈ ರೀತಿ ಸ್ನೇಹಿತರು ಬಾಲಕಿಯ ಮನೆ ಮುಂದೆ ಬಂದಾಗ ಆಕೆ ಸಂತೋಷದಿಂದ ಕಣ್ಣೀರಾದಳು. ವಿಡಿಯೋವನ್ನು ಗುಡ್‌ನ್ಯೂಸ್ ಮೂವ್‌ಮೆಂಟ್‌ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಳ್ಳಲಾಗಿದೆ.
ಯಾರೂ ಏಕಾಂಗಿಯಾಗಿ ಹೋರಾಡುವುದಿಲ್ಲ. ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಹದಿಹರೆಯದವರು ಒಗ್ಗಟ್ಟಾಗಿ ತಮ್ಮ ತಲೆಯನ್ನು ಬೋಳಿಸಿಕೊಂಡಿದ್ದಾರೆ. ಬಳಿಕ ಸ್ನೇಹಿತೆಯ ಮನೆಗೆ ಬಂದಾಗ ಆಕೆ ಅಚ್ಚರಿಗೊಳಗಾಗ್ತಾಳೆ. ನಿಮಗೆ ಸ್ನೇಹಿತರಿದ್ದರೆ, ನಿಮಗೆ ಎಲ್ಲವೂ ಇದೆ ಎಂದರ್ಥ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.
ನೆಟ್ಟಿಗರು ಈ ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ರು. ಕೆಲವರು ಬಾಲಕಿ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದರು. ಇಂತಹ ಸ್ನೇಹಿತರನ್ನು ಹೊಂದಿರುವಾಗ ನೀವು ಎಂದಿಗೂ ಒಂಟಿಯಾಗಿ ನಡೆಯುವುದಿಲ್ಲ ಎಂದು ಬಳಕೆದಾರರು ಬರೆದಿದ್ದಾರೆ. ತಮ್ಮ ಸ್ನೇಹಿತೆಯೊಂದಿಗೆ ಒಗ್ಗಟ್ಟಿನಿಂದ ನಿಂತಿರುವುದನ್ನು ನೋಡಲು ಸಂತೋಷವಾಗುತ್ತದೆ. ನಾವು ಜೊತೆಯಾಗಿ ನಿಂತಷ್ಟೂ ಹೊರೆ ಹಗುರವಾಗುತ್ತದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.
https://twitter.com/GoodNewsMVT/status/1661765278911307784?ref_src=twsrc%5Etfw%7Ctwcamp%5Etweetembed%7Ctwterm%5E1661765278911307784%7Ctwgr%5Ed1e9e7fbec8271b37997caa2beecd78dcc2423d6%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fgroup-of-friends-shave-heads-in-solidarity-with-girl-end-battling-cancer-viral-2384772-2023-05-26
https://twitter.com/RebekahLord28/status/1661862385538289665?ref_src=twsrc%5Etfw%7Ctwcamp%5Etweetembed%7Ctwterm%5E1661862385538289
https://twitter.com/Greta_Hutabarat/status/1661774493726175232?ref_src=twsrc%5Etfw%7Ctwcamp%5Etweetembed%7Ctwter