alex Certify BIG NEWS: ಜಿಪಂ, ತಾಪಂ ಚುನಾವಣೆ ಘೋಷಣೆ ಶೀಘ್ರ; ಮತಪಟ್ಟಿ, ಮತಕೇಂದ್ರ ತಯಾರಿಗೆ ಚುನಾವಣೆ ಆಯೋಗ ಸಿದ್ದತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜಿಪಂ, ತಾಪಂ ಚುನಾವಣೆ ಘೋಷಣೆ ಶೀಘ್ರ; ಮತಪಟ್ಟಿ, ಮತಕೇಂದ್ರ ತಯಾರಿಗೆ ಚುನಾವಣೆ ಆಯೋಗ ಸಿದ್ದತೆ

ಬೆಂಗಳೂರು: ವಿಧಾನಸಭೆ ಚುನಾವಣೆ ಮುಕ್ತಾಯವಾಗಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಈಗ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ಘೋಷಣೆಗೆ ಸಿದ್ಧತೆ ಆರಂಭವಾಗಿದೆ.

ಮತದಾರರ ಪಟ್ಟಿ ಸಿದ್ಧತೆ, ಮತದಾನ ಕೇಂದ್ರಗಳ ಸ್ಥಾಪನೆ ಸಂಬಂಧ ಕಾರ್ಯಪ್ರವೃತ್ತರಾಗವಂತೆ ರಾಜ್ಯ ಚುನಾವಣಾ ಆಯೋಗದಿಂದ ಉಪವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್ ಗಳಿಗೆ ಸೂಚನೆ ನೀಡಲಾಗಿದೆ.

ಶುಕ್ರವಾರ ಈ ಸಂಬಂಧ ಚುನಾವಣೆ ಆಯೋಗದಿಂದ ಸುತ್ತೋಲೆ ಹೊರಡಿಸಲಾಗಿದ್ದು, ಮೇ 29 ರಿಂದ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಕ್ಷೇತ್ರದ ಮತದಾರರನ್ನು ಗುರುತಿಸುವ ಕಾರ್ಯ ಆರಂಭಿಸಲು ತಿಳಿಸಲಾಗಿದೆ. ಜೂನ್ 4ರವರೆಗೆ ಈ ಕಾರ್ಯ ನಡೆಯಲಿದೆ. ಜೂನ್ 5 ರಿಂದ 13 ರವರೆಗೆ ಮತದಾರರ ಪಟ್ಟಿ ಪರಿಶೀಲನೆ ಕಾರ್ಯ ನಡೆಯಲಿದ್ದು, ಜೂನ್ 14ರಿಂದ ಕರಡು ಮತದಾರರ ಪಟ್ಟಿ ಪ್ರಕಟ ಸಲಾಗುವುದು. ಜೂನ್ 19ರಂದು ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನವಾಗಿದೆ. ಜೂನ್ 22 ರಂದು ಆಕ್ಷೇಪಣೆ ಸಲ್ಲಿಸಲು ಅಂತಿಮ ದಿನವಾಗಿದೆ. ಮತ್ತೊಮ್ಮೆ ಪರಿಶೀಲನೆ ಕಾರ್ಯ ಜೂನ್ 25ರಂದು ನಡೆಸಲಾಗುವುದು. ಜೂನ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಚುನಾವಣೆ ಆಯೋಗ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...