
ಶಾಂತಮ್ಮ ಹಲ್ಲೆಗೊಳಗಾದ ಮಹಿಳೆ. ಶಾಂತಮ್ಮ ಪತಿ ಕೋವಿಡ್ ನಿಂದ ಸಾವನ್ನಪ್ಪಿದ್ದರು. ಶಾಂತಮ್ಮ ಒಬ್ಬರೇ ವಾಸವಾಗಿದ್ದರು. ನಾಲ್ಕು ಮನೆ ಬಾಡಿಗೆಗೆ ಕೊಟ್ಟಿದ್ದರು. ಎರಡು ಮನೆ ಖಾಯಿಯಾಗಿದ್ದರಿಂದ ಖಾಲಿಯಿರುವ ಮನೆಯನ್ನು ಮತ್ತೆ ಬಾಡಿಗೆಗೆ ನೀಡಲು ಮುಂದಾಗಿದ್ದರು.
15 ದಿನಗಳಿಂದ ಪದೇ ಪದೇ ಬಾಡಿಗೆ ಕೇಳಲು ಬಂದು ವಿಚಾರಿಸಿ ಪರಿಚಯ ಮಾಡಿಕೊಂಡಿದ್ದ ಇಬ್ಬರು ಮಹಿಳೆಯರು ಏರಿಯಾವನ್ನು ಗಮನಿಸಿದ್ದರು. ಅಲ್ಲದೇ ಶಾಂತಮ್ಮ ಕುಟುಂಬದ ಬಗ್ಗೆ ವಿಚಾರಿಸಿ ಮಾಹಿತಿ ಪಡೆದು ಶಾಂತಮ್ಮ ಒಬ್ಬರೇ ವಾಸವಾಗುತ್ತಾರೆ ಎಂಬುದನ್ನು ತಿಳಿದುಕೊಂಡಿದ್ದರು. ಪಕ್ಕಾ ಪ್ಲಾನ್ ಮಾಡಿ ಹಾಲು ಉಕ್ಕಿಸುವುದಾಗಿ ಹೇಳಿ ಬಂದ ಮಹಿಳೆಯರು, ಶಾಂತಮ್ಮ ಬಾಡಿಗೆ ಮನೆ ಬಾಗಿಲು ತೆರೆದು ಒಳ ಹೋಗುತ್ತಿದ್ದಂತೆ ಅವರ ತಲೆ ಮೇಲೆ ಬಲವಾಗಿ ಹೊಡೆದು ಕೊರಳಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಶಾಂತಮ್ಮ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

