HomeCrimeಹೆಚ್ಚು ದರ ನೀಡದ ಟೆಕ್ಕಿಗೆ ಆಟೋ ಗುದ್ದಿಸಿದ ಚಾಲಕ: ಶಾಕಿಂಗ್ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಹೆಚ್ಚು ದರ ನೀಡದ ಟೆಕ್ಕಿಗೆ ಆಟೋ ಗುದ್ದಿಸಿದ ಚಾಲಕ: ಶಾಕಿಂಗ್ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಆಟೋ ಚಾಲಕ ಕೇಳಿದ ಹೆಚ್ಚುವರಿ ದರವನ್ನು ನೀಡಲು ನಿರಾಕರಿಸಿದ ಟೆಕ್ಕಿ ಓರ್ವನನ್ನು ಚಾಲಕ ಗುದ್ದಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಎಚ್‌ಎಸ್‌ಆರ್ ಲೇಔಟ್ ಸೆಕ್ಟರ್ ಒಂದರಲ್ಲಿ ಗುರುವಾರ ಬೆಳಗಿನ ಜಾವ 3.30ಕ್ಕೆ ಈ ಘಟನೆ ನಡೆದಿದೆ. ಈ ಕೃತ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಟೆಕ್ಕಿ ಆಟೋದಲ್ಲಿ ಹೋಗಲು ನಿರ್ಧರಿಸಿದಾಗ ಹೆಚ್ಚುವರಿ ದರವನ್ನು ಚಾಲಕ ಕೇಳಿದ್ದಾನೆ. ಇದರಿಂದ ಟೆಕ್ಕಿ ವಾದ ಮಾಡಿ ಬರುವುದಿಲ್ಲ ಎಂದು ಹೇಳಿ ರಾಪಿಡೋ ಬೈಕ್‌ ಬುಕ್‌ ಮಾಡಲು ನಿರ್ಧರಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೈಕ್ ಬುಕ್‌ ಮಾಡಿ ಅದಕ್ಕೆ ಕಾಯುತ್ತಿದ್ದ ವೇಳೆ ಚಾಲಕ ಟೆಕ್ಕಿ ಅವರನ್ನು ಗುದ್ದಿರುವುದನ್ನು ಸಿಸಿ ಟಿವಿಯಲ್ಲಿ ನೋಡಬಹುದು. ಈ ವೇಗಕ್ಕೆ ಟೆಕ್ಕಿ ಅಲ್ಲಿಯೇ ಬಿದ್ದಿರುವುದನ್ನು ಕಾಣಬಹುದು. ಆಟೋ ಚಾಲಕ ಪರಾರಿಯಾಗಿದ್ದು, ಸಿಸಿ ಟಿವಿ ಕ್ಯಾಮೆರಾದ ದೃಶ್ಯಾವಳಿ ಆಧರಿಸಿ ಪೊಲೀಸರು ಆಟೋ ಚಾಲಕನಿಗಾಗಿ ಶೋಧ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular