HomeAutoತಡೆಗೋಡೆಗೆ ಡಿಕ್ಕಿ ಹೊಡೆದು ರೇಲಿಂಗ್ ಮೇಲೆ ಹತ್ತಿ ನಿಂತ ಕಾರು....!

ತಡೆಗೋಡೆಗೆ ಡಿಕ್ಕಿ ಹೊಡೆದು ರೇಲಿಂಗ್ ಮೇಲೆ ಹತ್ತಿ ನಿಂತ ಕಾರು….!

ಅತಿ ವೇಗವಾಗಿ ಬಂದ ಕಾರೊಂದು ತಡೆಗೋಡೆಗೆ ಡಿಕ್ಕಿ ಹೊಡೆದು ಬಳಿಕ ರೇಲಿಂಗ್ ಮೇಲೆ ಹತ್ತಿ ನಿಂತ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ – ಭದ್ರಾವತಿ ರಸ್ತೆಯ ಮಲವಗೊಪ್ಪ ಬಳಿ ಈ ಘಟನೆ ನಡೆದಿದ್ದು, ಕಾರು ಚಾಲಕ ವಿನಯ್ ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಲವಗೊಪ್ಪ ಮತ್ತು ಹರಿಗೆ ನಡುವೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಹೀಗಾಗಿ ಒಂದೇ ಬದಿ ಸಂಚರಿಸುವಂತೆ ಕಾಂಕ್ರೀಟ್ ಬ್ಯಾರಿಕೇಡ್ ಬ್ಲಾಕ್ ಅಳವಡಿಸಲಾಗಿತ್ತು. ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಇದಕ್ಕೆ ಡಿಕ್ಕಿ ಹೊಡೆದು ಬಳಿಕ ರೇಲಿಂಗ್ ಮೇಲೆ ಹತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular