HomeInternationalVideo | ಹುಟ್ಟುಹಬ್ಬಕ್ಕೆ ಪತಿ - ಮಗಳಿಂದ ಸ್ವೀಟ್ ಸರ್‌ಪ್ರೈಸ್ ಪಡೆದ ಮಹಿಳೆ

Video | ಹುಟ್ಟುಹಬ್ಬಕ್ಕೆ ಪತಿ – ಮಗಳಿಂದ ಸ್ವೀಟ್ ಸರ್‌ಪ್ರೈಸ್ ಪಡೆದ ಮಹಿಳೆ

ತಮ್ಮ ಹುಟ್ಟುಹಬ್ಬದ ದಿನದಾರಂಭಕ್ಕೆ ಮುದ್ದು ಮಗಳು ಹಾಗೂ ಪತಿಯಿಂದ ಸ್ವೀಟ್ ಸರ್‌ಪ್ರೈಸ್ ಪಡೆದ ಮಹಿಳೆಯೊಬ್ಬರ ವಿಡಿಯೋ ನೆಟ್ಟಿಗರಲ್ಲಿ ಹೊಸ ಫ್ಯಾಮಿಲಿ ಗೋಲ್ ಹುಟ್ಟುಹಾಕಿದೆ.

ಮಹಿಳೆ ಮಲಗಿದ್ದ ಕೋಣೆಗೆ ನಡೆದು ಬರುವ ಅಪ್ಪ-ಮಗಳ ಜೋಡಿ, ’ಹ್ಯಾಪಿ ಬರ್ತಡೇ’ ಹಾಡುವ ಮೂಲಕ ಆಕೆಯನ್ನು ನಿದ್ರೆಯಿಂದ ಎಬ್ಬಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನೂ ಅರ್ಧಂಬರ್ಧ ನಿದ್ರೆಯಲ್ಲಿದ್ದ ಮಹಿಳೆಗೆ ತನ್ನ ಮುದ್ದಿನ ಮಗಳು ಹುಟ್ಟುಹಬ್ಬದ ಉಡುಗೊರೆ ಕೊಟ್ಟಿದ್ದು ಭಾರೀ ಖುಷಿ ಕೊಟ್ಟಿದ್ದು ಆಕೆಯ ಪ್ರತಿಕ್ರಿಯೆಗಳು ನೆಟ್ಟಿಗರಿಗೆ ಬಲು ಇಷ್ಟವಾಗಿದೆ.

ಪುಟಾಣಿ ಬಾಲೆ ತನ್ನ ಮುದ್ದು ಮುದ್ದು ಭಾಷೆಯಲ್ಲೇ ತನ್ನ ಮಮ್ಮಿಗೆ ’ಹ್ಯಾಪಿ ಬರ್ತಡೇ’ ಹೇಳುತ್ತಿರುವುದಂತೂ ಭಾರೀ ಕ್ಯೂಟ್ ಆಗಿದ್ದು, ಅವಳು ಕಪ್ ಕೇಕ್ ಹಿಡಿದುಕೊಂಡು ತನ್ನಮ್ಮನಿಗೆ ಕೊಡುವ ಬಗೆಯೂ ಸಹ ಬಲು ಮುದ್ದಾಗಿದೆ ಎಂದು ನೆಟ್ಟಿಗರು ಕೊಂಡಾಡುತ್ತಾ ಕಾಮೆಂಟ್‌ಗಳನ್ನು ಹಾಕಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular